ಕರ್ನಾಟಕ

karnataka

ETV Bharat / business

Gold Price: 3ನೇ ದಿನವೂ ಚಿನ್ನ, ಬೆಳ್ಳಿ ದರ ಏರಿಕೆ - ಬೆಳ್ಳಿ

ಕೋವಿಡ್‌ ಸಂಕಷ್ಟದಲ್ಲಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಗ್ರಾಂಗೆ 68 ರೂಪಾಯಿ ಹಾಗೂ ಬೆಳ್ಳಿ ಕೆ.ಜಿಗೆ 300 ರೂಪಾಯಿ ಏರಿಕೆಯಾಗಿದೆ.

Yellow metal shines again, MCX gold near Rs 49,300; silver up over 0.50%
Gold Price: 3ನೇ ದಿನವೂ ಚಿನ್ನ, ಬೆಳ್ಳಿ ದರ ಏರಿಕೆ

By

Published : Jun 11, 2021, 1:51 PM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರಿಕೆಯ ಬಿಸಿ ಭಾರತಕ್ಕೂ ತಟ್ಟಿದೆ. ಪರಿಣಾಮ, ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ 3ನೇ ದಿನವಾದ ಇಂದೂ ಕೂಡ ಏರಿಕೆ ಕಂಡಿದೆ.

ಸದ್ಯ ಗ್ರಾಂಗೆ 68 (0.16 ರಷ್ಟು) ರೂಪಾಯಿ ಹೆಚ್ಚಳದೊಂದಿಗೆ 10 ಗ್ರಾಂ ಚಿನ್ನದ ದರ 49,270 ರೂಪಾಯಿ ಇದೆ. ಬೆಳ್ಳಿ 300 (0.47 ರಷ್ಟು) ರೂಪಾಯಿ ಏರಿಕೆಯೊಂದಿಗೆ ಕೆ.ಜಿಗೆ 79,198 ರೂಪಾಯಿ ಇದೆ. ಇನ್ನು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್‌ಗೆ 1,900 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ಅಮೆರಿಕದ ಬಾಂಡ್ ಗಳಿಕೆ ಕಡಿಮೆ ಆಗಿರುವುದರಿಂದ ಚಿನ್ನದ ದರ ಏರಿಕೆ ಆಗಿದೆ ಎಂದು ಕೋಲ್ಕತ್ತಾ ಮೂಲದ ಸಿಎಂಟಿ ಮುಖ್ಯಸ್ಥ ರವೀಂದ್ರ ರಾವ್‌ ತಿಳಿಸಿದ್ದಾರೆ.

ABOUT THE AUTHOR

...view details