ನವದೆಹಲಿ: ಮೈಕ್ರೋಸಾಫ್ಟ್ ತನ್ನ ಮುಂದಿನ ಜನರೇಷನ್ನ ಎಕ್ಸ್ ಬಾಕ್ಸ್ ಸೀರೀಸ್ ಎಸ್ ಮತ್ತು ಎಕ್ಸ್ ಬಾಕ್ಸ್ ಸೀರೀಸ್ ಎಕ್ಸ್ ಈಗ ಭಾರತದಲ್ಲಿ ಖರೀದಿಗೆ ಲಭ್ಯವಿದೆ ಎಂದು ತಿಳಿಸಿದೆ.
ಭಾರತದಲ್ಲಿ ಎಕ್ಸ್‌ಬಾಕ್ಸ್ ಸೀರಿಸ್ ಎಕ್ಸ್‌ನ ಬೆಲೆ 49,990 ರೂ. ಹಾಗೂ ಎಕ್ಸ್‌ಬಾಕ್ಸ್ ಸಿರೀಸ್ ಎಸ್ 34,990 ರೂ.ಗೆ ನಿಗದಿಪಡಿಸಲಾಗಿದೆ. ಈ ಎರಡೂ ಉತ್ಪನ್ನಗಳು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಆಫ್‌ಲೈನ್ ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ.
ಎಕ್ಸ್ ಬಾಕ್ಸ್ ಸೀರೀಸ್ ಎಸ್ ಮತ್ತು ಎಕ್ಸ್ ಬಾಕ್ಸ್ ಸೀರೀಸ್ ಎಕ್ಸ್
ಎಕ್ಸ್‌ಬಾಕ್ಸ್ ಸೀರೀಸ್ ಎಕ್ಸ್ನಲ್ಲಿ ಝೇನ್2 ಆಧಾರಿತ ಆಕ್ಟಾ-ಕೋರ್ ಸಿಪಿಯು ಗರಿಷ್ಠ 3.8GHz (ವಿದ್ಯುತ್ಕಾಂತೀಯ ರೆಡಿಯೇಷನ್) ಹೊಂದಿದ್ದು, 16GB ಜಿಆರ್ಆರ್ಡಿಯ 6 RAMನೊಂದಿಗೆ ಜೋಡಿಯಾಗಿದೆ. ಎಕ್ಸ್‌ಬಾಕ್ಸ್ ಸಿರೀಸ್ ಎಸ್‌ಗಿಂತ ಎಕ್ಸ್‌ಬಾಕ್ಸ್ ಸಿರೀಸ್ ಎಸ್, ಆಕ್ಟಾ - ಕೋರ್ ಝೇನ್ 2 ಆಧಾರಿತ ಸಿಪಿಯು 3.6GHzದಿಂದ ಕೂಡಿದೆ. ಇದು 10GB ಜಿಡಿಡಿಆರ್ 6 RAMನಿಂದ ಸಾಮರ್ಥ್ಯ ಹೊಂದಿದೆ.
ಎಕ್ಸ್ ಬಾಕ್ಸ್ ಸಿರೀಸ್ ಎಸ್, 10 ಜಿಬಿ ಜಿಡಿಡಿಆರ್ 6 RAM ಮತ್ತು 512 ಜಿಬಿ ಎನ್ವಿಎಂ ಎಸ್ಎಸ್ಟಿ ಸಂಗ್ರಹ ಹೊಂದಿದೆ. ಎಕ್ಸ್ ಬಾಕ್ಸ್ ಸಿರೀಸ್ ಎಸ್ ವಿಸ್ತರಣೀಯ ಸಂಗ್ರಹಣೆಗೂ ಬೆಂಬಲವಾಗಿದೆ. ಎಕ್ಸ್ ಬಾಕ್ಸ್ ಸಿರೀಸ್ ಎಕ್ಸ್ 4ಕೆ ರೆಸಲ್ಯೂಷನ್‌ನಲ್ಲಿ 120 ಎಫ್‌ಪಿಎಸ್ ಗೇಮ್‌ಪ್ಲೇ ಸಾಮರ್ಥ್ಯವಿದೆ. ಎಕ್ಸ್‌ಬಾಕ್ಸ್ ಎಸ್ ಕೇವಲ 1440 ಪಿ ರೆಸಲ್ಯೂಷನ್ ಗೇಮ್‌ಪ್ಲೇ ನೀಡುತ್ತದೆ. 120 ಎಫ್‌ಪಿಎಸ್ ಫ್ರೇಮ್ ದರ ಹೊಂದಿದೆ. ಆಟೋ ಲೋ ಲ್ಯಾಟೆನ್ಸಿ ಮೋಡ್, ಎಚ್‌ಡಿಎಂಐ ವೇರಿಯಬಲ್ ರಿಫ್ರೆಶ್ ರೇಟ್ ಮತ್ತು ಎಎಂಡಿ ಫ್ರೀಸಿಂಕ್‌ನಂತಹ ಫೀಚರ್ ಸಹ ಹೊಂದಿದೆ.
ಸೌಂಡ್ನಲ್ಲಿ ಎಕ್ಸ್‌ಬಾಕ್ಸ್ ಸಿರೀಸ್ ಎಸ್ ಹೆಚ್ಚು ಭಿನ್ನವಾಗಿಲ್ಲ. ಡಾಲ್ಬಿ ಡಿಜಿಟಲ್ 5.1 ಆಡಿಯೋ ಮತ್ತು ಅಟ್ಮೋಸ್‌ನೊಂದಿಗೆ ಡಾಲ್ಬಿ ಟ್ರೂಹೆಚ್‌ಡಿ ಎರಡಕ್ಕೂ ಬೆಂಬಲವಾಗುತ್ತದೆ.