ಕರ್ನಾಟಕ

karnataka

ETV Bharat / business

ಈ ಇಬ್ಬರ ಮಾತಿನ ಚಕಮಕಿಗೆ 8.3 ಲಕ್ಷ ಕೋಟಿ ರೂ. ಲಾಸ್​ - ಡಾಲರ್​

ಅಮೆರಿಕ- ಚೀನಾ ನಡುವಿನ ವಾಣಿಜ್ಯ ಉದ್ವಿಗ್ನಕ್ಕೆ ಸಿಲುಕಿದ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಮಾತಿನ ಸಮರಕ್ಕೆ ಸಿಲುಕಿ ಅಮೆರಿಕದ ಷೇರುಪೇಟೆ, ಈ ವರ್ಷದ ಅತಿದೊಡ್ಡ ಕುಸಿತ ದಾಖಲಿಸಿದೆ. ಪರಿಣಾಮ ವಿಶ್ವದ 21 ಅಗ್ರ ಶ್ರೀಮಂತ ಉದ್ಯಮಗಳ 1 ಬಿಲಿಯನ್​ ಡಾಲರ್​ನಷ್ಟು ಸಂಪತ್ತು 24 ಗಂಟೆಗಳಲ್ಲಿ ಕರಗಿದೆ.

ಸಾಂದರ್ಭಿಕ ಚಿತ್ರ

By

Published : Aug 6, 2019, 9:51 PM IST

ನವದೆಹಲಿ: ವಿಶ್ವದ ಅಗ್ರ 500 ಕುಬೇರರು ಸೋಮವಾರದ ಷೇರುಪೇಟೆಯಲ್ಲಿ ತಮ್ಮ ಒಟ್ಟು ಸಂಪತ್ತಿನಲ್ಲಿ ಶೇ 2.1ರಷ್ಟು ಕಳೆದುಕೊಂಡಿದ್ದಾರೆ.

ಅಮೆರಿಕ - ಚೀನಾ ನಡುವಿನ ವಾಣಿಜ್ಯ ಉದ್ವಿಗ್ನತೆಗೆ ಸಿಲುಕಿದ ಉಭಯ ರಾಷ್ಟ್ರಗಳ ವ್ಯಾಪಾರ ಸಂಬಂಧ ಮಾತಿನ ಸಮರಕ್ಕೆ ಸಿಲುಕಿ ಅಮೆರಿಕದ ಷೇರುಪೇಟೆ, ಈ ವರ್ಷದ ಅತಿದೊಡ್ಡ ಕುಸಿತ ದಾಖಲಿಸಿದೆ. ಪರಿಣಾಮ ವಿಶ್ವದ 21 ಅಗ್ರ ಶ್ರೀಮಂತ ಉದ್ಯಮಗಳ 1 ಬಿಲಿಯನ್​ ಡಾಲರ್​ನಷ್ಟು ಸಂಪತ್ತು ಕೇವಲ 24 ಗಂಟೆಗಳಲ್ಲಿ ಕರಗಿದೆ.

ಅಮೆಜಾನ್ ಸಂಸ್ಥೆಯ ಜೆಫ್ ಬೆಜೋಸ್ ತನ್ನ ಆನ್‌ಲೈನ್ ಚಿಲ್ಲರೆ ಷೇರುಗಳ ಕುಸಿತದಿಂದ 3.4 ಬಿಲಿಯನ್ ಡಾಲರ್​​ನಷ್ಟು ಹಣ ಕಳೆದುಕೊಂಡಿದೆ. ಆದರೆ, ತಮ್ಮ ಬಳಿ ಇನ್ನೂ 110 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ಅಗ್ರ ಶ್ರೀಮಂತ ಪಟ್ಟ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಸೋಮವಾರದಂದು ಜಾಗತಿಕ ಪೇಟೆಗಳಲ್ಲಿ ಕಂಡುಬಂದ ಮಂದಗತಿಯ ಆರ್ಥಿಕ ಬೆಳವಣಿಗೆಯಿಂದ ವಿಶ್ವದ ಅಗ್ರ 500 ಕುಬೇರರು ತಮ್ಮ ಒಟ್ಟು ಸಂಪತ್ತಿನಲ್ಲಿ ಶೇ 2.1ರಷ್ಟು ಕಳೆದುಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 8.23 ಲಕ್ಷ ಕೋಟಿ (117 ಬಿಲಿಯನ್​ ಡಾಲರ್​) ಆಗಲಿದೆ.

ABOUT THE AUTHOR

...view details