ಬೆಲ್ಗ್ರೇಡ್:ಸೆರ್ಬಿಯಾದಲ್ಲಿ ಕತ್ತೆ ಹಾಲಿನಿಂದ ತಯಾರಾಗುವ ಗಿಣ್ಣಿನಂತಹ ಪದಾರ್ಥಕ್ಕೆ ಭಾರೀ ಬೇಡಿಕೆ ಇದ್ದು, 'ಮೂಗಿಗಿಂತ ಮೂಗುತಿ ಭಾರ' ಎನ್ನುವಂತ್ತಿದೆ ಇದರ ಬೆಲೆ.
ಕತ್ತೆ ಹಾಲಿನ ಗಿಣ್ಣಿನ ಬೆಲೆ ಕೇಳಿದರೆ ಶಾಕ್... ಪಲ್ಸರ್ ಬೈಕ್ಗಿಂತ ಕೆಜಿ ಗಿಣ್ಣಿನ ಬೆಲೆ ಜಾಸ್ತಿ! -
ಉತ್ತರ ಸೆರ್ಬಿಯಾದ ಜಸಾವಿಕಾದಲ್ಲಿ ಸಿಮಿಕ್ ಮತ್ತು ತಂಡ 2012ರಿಂದ ಕತ್ತೆ ಹಾಲಿನ ಗಿಣ್ಣು ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಸುಮಾರು 200 ಕತ್ತೆಗಳ ಹಾಲಿನಿಂದ ಗಿಣ್ಣು ತಯಾರಿಸುವ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.
ಕತ್ತೆ ಹಾಲಿನಿಂದ ತಯಾರಾಗುವ ಈ ಗಿಣ್ಣು ಒಂದು ಕೆಜಿಗೆ ₹78,530ನಲ್ಲಿ (1,130 ಯುರೋ) ಮಾರಾಟವಾಗುತ್ತದೆ.ಪ್ರಕೃತಿ ಮೀಸಲು ಪ್ರದೇಶವಾದ ಉತ್ತರ ಸೆರ್ಬಿಯಾದ ಜಸಾವಿಕಾದಲ್ಲಿ ಸಿಮಿಕ್ ಮತ್ತು ತಂಡ 2012ರಿಂದ ಕತ್ತೆ ಹಾಲಿನ ಗಿಣ್ಣು ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಸುಮಾರು 200 ಕತ್ತೆಗಳ ಹಾಲಿನಿಂದ ಗಿಣ್ಣು ತಯಾರಿಸುವ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.
ಕತ್ತೆಯ ಹಾಲಿನಲ್ಲಿ ಅಸ್ತಮಾ ಮತ್ತು ಬ್ರಾಂಕೈಟಿಸ್ ನಂತಹ ಕಾಯಿಲೆಗಳನ್ನು ಗುಣಪಡಿಸುವ ಔಷಧಿ ಗುಣ ಇದೆ. ನವಜಾತ ಶಿಶುಗಳಿಗೂ ಈ ಹಾಲನ್ನು ಕೊಡಬಹುದು. ಇದು ಪ್ರಕೃತಿಯ ಅದ್ಭುತಗಳಲ್ಲಿ ಒಂದು ಎಂದ ಸಿಮಿಕ್ ಹೇಳಿದ್ದಾರೆ.