ಮುಂಬೈ:ಸಿಲಿಕಾನ್ ಸಿಟಿಯ ಪ್ರಮುಖ ಐಟಿ ಕಂಪನಿಯಾದ ವಿಪ್ರೋ ಷೇರು ಬೆಲೆ ಇಂದು ಬಿಎಸ್‌ಇಯಲ್ಲಿ 486.70 ರೂ.ಗೆ ತಲುಪಿದ್ದು, ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳೀಕರಣ 2.65 ಲಕ್ಷ ಕೋಟಿ ರೂ.ಗಳಷ್ಟಾಗಿದೆ.
ಐಟಿ ದೈತ್ಯ ವಿಪ್ರೋ ಮಾರುಕಟ್ಟೆ ಬಂಡವಾಳೀಕರಣದ ದೃಷ್ಟಿಯಿಂದ ಎಚ್‌ಸಿಎಲ್ ಟೆಕ್ನಾಲಜೀಸ್ ಹಿಂದಿಕ್ಕಿ, ಭಾರತದ ಮೂರನೇ ಅತ್ಯಂತ ಮೌಲ್ಯಯುತ ಐಟಿ ಸಂಸ್ಥೆಯಾಗಿದೆ. ಬಿಎಸ್ಇ ಅಂಕಿ - ಅಂಶಗಳ ಪ್ರಕಾರ ಏಪ್ರಿಲ್ 22ರ ವೇಳೆಗೆ ವಿಪ್ರೋ 2.66 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳೀಕರಣದೊಂದಿಗೆ ಒಟ್ಟಾರೆ ಶ್ರೇಯಾಂಕದಲ್ಲಿ 12ನೇ ಸ್ಥಾನದಲ್ಲಿದೆ.
2.60 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳದೊಂದಿಗೆ ಎಚ್‌ಸಿಎಲ್ ಟೆಕ್ನಾಲಜೀಸ್ 13ನೇ ಸ್ಥಾನದಲ್ಲಿದೆ. ಹೊಸ ಒಪ್ಪಂದ, ನಾಲ್ಕನೇ ತ್ರೈಮಾಸಿಕದ ಫಲಿತಾಂಶ, ರೂಪಾಯಿ ದುರ್ಬಲತೆ, ಐಟಿ ಮತ್ತು ಗ್ರಾಹಕ ಭದ್ರತಾ ಕ್ಷೇತ್ರಗಳಲ್ಲಿ ಬಲವಾದ ಖರೀದಿಯಿಂದಾಗಿ ವಿಪ್ರೋ ತನ್ನ ಇತರ ಐಟಿ ಗೆಳೆಯರನ್ನು ಮೀರಿಸಿದೆ ಎಂದು ವಿಶ್ಲೇಷಕರೊಬ್ಬರು ಹೇಳಿದ್ದಾರೆ.