ಕರ್ನಾಟಕ

karnataka

ETV Bharat / business

ತುರ್ತಾಗಿ ನಿಮ್ಮ ವಾಟ್ಸ್​ಆ್ಯಪ್​ ಅಪ್​ಡೇಟ್​ ಮಾಡಿ... ಇಲ್ಲದಿದ್ದಲ್ಲಿ ನಿಮ್ಮ ಡೇಟಾ ಕಳವಾಗಲಿದೆ..! - undefined

ಈಚೆಗೆ ಇಸ್ರೇಲ್​ ಮೂಲದ ಎನ್​ಸ್​ಒ ಎಂಬ ಕಂಪನಿ ಡೇಟಾ ಕಳವು ಬಗ್ಗೆ ವಾಟ್ಸ್​ಆ್ಯಪ್ ಸಂಸ್ಥೆಗೆ ಮಾಹಿತಿ ನೀಡಿದೆ. ಕೋಡ್ ಮೂಲಕ ಬರುವ ಒಂದು ಕರೆ (ಸ್ವೀಕರಿಸಿದರೂ ಅಥವಾ ಸ್ವೀಕರಿಸದಿದ್ದರೂ) ಬಳಕೆದಾರರ ಮೊಬೈಲ್​ ಅನ್ನು ಹ್ಯಾಕ್​ ಮಾಡಲಿದೆ. ಇದರಿಂದ ಬಳಕೆದರನ ಮೊಬೈಲ್​ನಲ್ಲಿ ಸಂಗ್ರಹವಾದ ಎಲ್ಲ ದಾಖಲೆ ಪಡೆದುಕೊಳ್ಳಲಿದೆ ಎಂಬ ಎಚ್ಚರಿಕೆ ರವಾನಿಸಿದೆ.

ಸಾಂದರ್ಭಿಕ ಚಿತ್ರ

By

Published : May 14, 2019, 9:47 PM IST

ನವದೆಹಲಿ:ವಾಟ್ಸ್​ಆ್ಯಪ್​ ತಂತ್ರಾಂಶದಲ್ಲಿ ಭದ್ರತೆ ದೋಷ ಕಂಡುಬಂದಿದ್ದು, ಇದನ್ನು ಪತ್ತೆಹಚ್ಚಿರುವ ವಾಟ್ಸ್​ಆ್ಯಪ್​, ಬಳಕೆದಾರರಿಗೆ ತಕ್ಷಣವೇ ತಮ್ಮ ವಾಟ್ಸ್​ಆ್ಯಪ್​ ಅಪ್​ಡೆಟ್ ಮಾಡಿಕೊಳ್ಳುವಂತೆ ಎಚ್ಚರಿಸಿದೆ.

ಈಚೆಗೆ ಇಸ್ರೇಲ್​ ಮೂಲದ ಎನ್​ಸ್​ಒ ಎಂಬ ಕಂಪನಿ ಡೇಟಾ ಕಳವು ಬಗ್ಗೆ ವಾಟ್ಸ್​ಆ್ಯಪ್ ಸಂಸ್ಥೆಗೆ ಮಾಹಿತಿ ನೀಡಿದೆ. ಕೋಡ್ ಮೂಲಕ ಬರುವ ಒಂದು ಕರೆ (ಸ್ವೀಕರಿಸಿದರೂ ಅಥವಾ ಸ್ವೀಕರಿಸದಿದ್ದರೂ) ಬಳಕೆದಾರರ ಮೊಬೈಲ್​ ಅನ್ನು ಹ್ಯಾಕ್​ ಮಾಡಲಿದೆ. ಇದರಿಂದ ಬಳಕೆದರನ ಮೊಬೈಲ್​ನಲ್ಲಿ ಸಂಗ್ರಹವಾದ ಎಲ್ಲ ಕರೆಯ ದಾಖಲೆ, ಸಂದೇಶ, ಇ-ಮೇಲ್​ಗಳು, ಫೋಟೋ, ಆಡಿಯೋ, ವಿಡಿಯೋ, ಸಂಪರ್ಕ ಸಂಖ್ಯೆ, ಮೊಬೈಲ್ ಜೋಡಣೆಯ ಸಾಮಾಜಿಕ ಜಾಲತಾಣಗಳ ಖಾತೆಗಳು... ಹೀಗೆ ಎಲ್ಲ ದಾಖಲೆಗಳನ್ನು ಸೈಬರ್​ ಇಂಟೆಲಿಜೆನ್ಸ್​ ಕಂಪನಿ ಎನ್​ಸ್​ಒನಿ ತೆರೆದುಕೊಳ್ಳಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಎಚ್ಚೆತ್ತುಕೊಂಡ ವಾಟ್ಸ್​ಆ್ಯಪ್​ ಸಂಸ್ಥೆ ಇದೇ ಮೇ 10ರಂದು ಐಒಎಸ್​ ಹಾಗೂ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಅಪ್​ಡೇಟ್ ವರ್ಷನ್​ ಬಿಡುಗಡೆ ಮಾಡಿದೆ.

ಹೀಗಾಗಿ, ಆ್ಯಂಡ್ರಾಯ್ಡ್​ V2.19.134 ಮತ್ತು ಇದಕ್ಕಿಂತ ಹಿಂದಿನ ಆವೃತ್ತಿ ಹಾಗೂ ಐಫೋನ್​ಗಳಲ್ಲಿ ಐಒಎಸ್​ v2.19.51. ಮತ್ತು ಹಿಂದಿನ ಆವೃತ್ತಿ, ವಿಂಡೋಸ್​ ಪೋನ್​ಗಳಲ್ಲಿನ v2.18.348 ಮತ್ತು ಹಿಂದಿನದು, ಟೈಜೆನ್​ v2.18.15 ಮತ್ತು ಹಿಂದಿನ ಆವೃತ್ತಿಯ ವಾಟ್ಸ್​ಆ್ಯಪ್​ ಮೆಸೆಂಜರ್​ ಅಪ್ಲಿಕೇಷನ್​ ಅನ್ನು ಅಪ್​ಡೇಟ್​ ಮಾಡಿಕೊಳ್ಳಿ ಎಂದು ಮನವಿ ಮಾಡಿದೆ.

ವಾಟ್ಸ್​ಆ್ಯಪ್ ಕನ್ನ ಹಾಕುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಇಸ್ರೇಲ್ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು, ಹ್ಯಾಕಿಂಗ್ ಜಾಲವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

For All Latest Updates

TAGGED:

ABOUT THE AUTHOR

...view details