ನವದೆಹಲಿ:ಕೇಂದ್ರ ಸರ್ಕಾರವುರಾಷ್ಟ್ರವ್ಯಾಪಿ ಲಾಕ್ಡೌನ್ನಿಂದ ಸಡಿಲಿಕೆ ನೀಡಿಅನ್ಲಾಕ್ 1.0 ಅನ್ನು ಘೋಷಿಸಿದಾಗಿನಿಂದ ತರಕಾರಿಗಳ ಪೂರೈಕೆ ಮತ್ತು ಅವುಗಳ ಬೆಲೆಯೊಂದಿಗೆ ಬೇಡಿಕೆ ಸಹ ಏರಿಕೆಯಾಗಿದೆ.
ದೆಹಲಿಯ ಆಜಾದ್‌ಪುರ್ ಮಂಡಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ದರ ಪಟ್ಟಿಯ ಪ್ರಕಾರ, ಟೊಮ್ಯಾಟೊ ಸಗಟು ಬೆಲೆ ಎರಡೂವರೆ ಪಟ್ಟು ಹೆಚ್ಚಿದ್ದರೇ ಆಲೂಗಡ್ಡೆ, ಈರುಳ್ಳಿ ಮತ್ತು ಇತರ ತರಕಾರಿಗಳ ಬೆಲೆಯೂ ಏರಿಕೆ ಆಗಿದೆ.
ದರ ಪಟ್ಟಿಯ ಪ್ರಕಾರ, ಎರಡು ವಾರಗಳ ಹಿಂದೆ ಟೊಮ್ಯಾಟೊದ ಸರಾಸರಿ ಸಗಟು ಒಂದು ಕೆ.ಜಿ.ಗೆ 3 ರೂ ಇತ್ತು. ಬುಧವಾರ ಅದು 6 ರೂ.ಯಷ್ಟಾಗಿದೆ. ಟೊಮ್ಯಾಟೊದ ಕನಿಷ್ಠ ಸಗಟು ಬೆಲೆ ಬದಲಾಗದೆ ಇದ್ದರೂ ಪ್ರತಿ ಸಗಟು ಬೆಲೆ ಕೆ.ಜಿ.ಗೆ 4.75 ರೂ.ನಿಂದ 18 ರೂ.ಗೆ ಏರಿಕೆಯಾಗಿದ್ದು, ಎರಡು ವಾರಗಳಲ್ಲಿ ಶೇ 279ರಷ್ಟು ಹೆಚ್ಚಳವಾಗಿದೆ.
ಈರುಳ್ಳಿಯ ಕನಿಷ್ಠ ಸಗಟು ಬೆಲೆಯು ಒಂದು ಕೆ.ಜಿ.ಗೆ 2.50 ರೂ.ಯಷ್ಟಿದೆ. ಜೂನ್ 3ರಂದು ಪ್ರತಿ ಕೆ.ಜಿ.ಗೆ ಗರಿಷ್ಠ 8.75 ರೂ.ಗಳಾಗಿತ್ತು. ಇದು ಕ್ರಮವಾಗಿ ಕೆ.ಜಿ.ಗೆ 4 ಮತ್ತು 11.50 ರೂ.ಗೆ ಏರಿದೆ. ಈರುಳ್ಳಿಯ ಸರಾಸರಿ ಚಿಲ್ಲರೆ ಬೆಲೆ ಕೂಡ ಪ್ರತಿ ಕೆ.ಜಿ.ಗೆ 6.25 ರೂ.ಯಿಂದ 8.50 ರೂ.ಗೆ ಹೆಚ್ಚಳವಾಗಿದೆ.
ಆಲೂಗಡ್ಡೆಯ ಕನಿಷ್ಠ ಸಗಟು ಬೆಲೆ ಕೆ.ಜಿ.ಗೆ 6 ರೂ.ಯಿಂದ 8 ರೂ.ಗೆ ಏರಿದರೇ ಗರಿಷ್ಠ ಸಗಟು ಬೆಲೆ 18 ರೂ.ಯಿಂದದ 21 ರೂ.ಗೆ ತಲುಪಿದೆ. ಆಲೂಗಡ್ಡೆಯ ಸರಾಸರಿ ಸಗಟು ಬೆಲೆ ಕಳೆದ 15 ದಿನಗಳಲ್ಲಿ ಪ್ರತಿ ಕೆ.ಜಿ.ಗೆ 14.50 ರೂ.ಯಿಂದದ 15.75 ರೂ.ಗೆ ಹೆಚ್ಚಳವಾಗಿದೆ.
ಸಗಟು ಬೆಲೆಯಲ್ಲಿನ ಹೆಚ್ಚಳವು ಚಿಲ್ಲರೆ ಬೆಲೆಯ ಏರಿಕೆಗೂ ಕಾರಣವಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಈರುಳ್ಳಿಯ ಚಿಲ್ಲರೆ ಬೆಲೆ ಕೆಜಿಗೆ 20 ರೂ.ಯಿಂದ 25-30 ರೂ.ಗೆ ಏರಿದ್ದರೆ, ಟೊಮೆಟೊವನ್ನು ಪ್ರತಿ ಕೆ.ಜಿ.ಗೆ 30-35 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ತರಕಾರಿಗಳ ಚಿಲ್ಲರೆ ಬೆಲೆ ಪ್ರತಿ ಕೆ.ಜಿ.ಗೆ 5-10 ರೂ.ಯಷ್ಟು ಮೇಲ್ಮುಖವಾಗಿದೆ.