ಕರ್ನಾಟಕ

karnataka

ETV Bharat / business

ಬಂಗಾರ ಪ್ರಿಯರಿಗೆ ಸಿಹಿ ಸಮಾಚಾರ: ಅರ್ಧ ಲಕ್ಷದಿಂದ ಕೆಳಗಿಳಿದ ಚಿನ್ನದ ದರ!

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್​​ನಲ್ಲಿ (ಎಂಸಿಎಕ್ಸ್) ಡಿಸೆಂಬರ್‌ನ ಚಿನ್ನದ ಒಪ್ಪಂದ ಪ್ರಸ್ತುತ 10 ಗ್ರಾಂ.ಗೆ 48,975 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ವಹಿವಾಟಿನ ಅಂತ್ಯಕ್ಕಿಂತ 505 ರೂ. ಅಥವಾ ಶೇ 1.02ರಷ್ಟು ಕಡಿಮೆಯಾಗಿದೆ.

File Picture
ಸಾಂದರ್ಭಿಕ ಚಿತ್ರ

By

Published : Nov 24, 2020, 1:30 PM IST

Updated : Nov 24, 2020, 2:51 PM IST

ಮುಂಬೈ: ದುರ್ಬಲ ಆರ್ಥಿಕ ಅನಿಶ್ಚಿತತೆಯ ಮಧ್ಯೆ ಕೆಲ ಸಮಯದವರೆಗೆ ಚಿನ್ನದ ಫ್ಯೂಚರ್ ಬೆಲೆ 50,000 ರೂ.ಗಿಂತಲೂ ಹೆಚ್ಚಾಗಿತ್ತು. ಈಗ ಇಳಿಕೆಯತ್ತ ಮುಖ ಮಾಡಿದ್ದು, ಕೊರೊನಾ ವೈರಸ್ ಲಸಿಕೆಗಳ ಬಗೆಗಿನ ಆಶಾವಾದದಿಂದಾಗಿ 49,000 ರೂ.ಗಿಂತ ಕಡಿಮೆ ಧಾರಣೆಗೆ ಇಳಿಕೆ ಆಗಿದೆ.

ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್​​ನಲ್ಲಿ (ಎಂಸಿಎಕ್ಸ್) ಡಿಸೆಂಬರ್‌ನ ಚಿನ್ನದ ಒಪ್ಪಂದ ಪ್ರಸ್ತುತ 10 ಗ್ರಾಂ.ಗೆ 48,975 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ಇದು ಹಿಂದಿನ ವಹಿವಾಟಿನ ಅಂತ್ಯಕ್ಕಿಂತ 505 ರೂ. ಅಥವಾ ಶೇ 1.02ರಷ್ಟು ಕಡಿಮೆಯಾಗಿದೆ.

ಜೊತೆಗೆ ಬೆಳ್ಳಿಯ ದೇಶೀಯ ಫ್ಯೂಚರ್​ ದರ ಮಂಗಳವಾರ ತನ್ನ ಕೆಳಮುಖ ಪ್ರವೃತ್ತಿ ಮುಂದುವರೆಸಿದೆ. ಎಂಸಿಎಕ್ಸ್‌ನ ಡಿಸೆಂಬರ್ ಒಪ್ಪಂದವು ಪ್ರಸ್ತುತ ಪ್ರತಿ ಕೆ.ಜಿ.ಗೆ 59,825 ರೂ.ಗಳಷ್ಟಿದೆ. ಇದು ಹಿಂದಿನ ಅಂತ್ಯಕ್ಕಿಂತ 700 ರೂ ಅಥವಾ ಶೇ 1.16ರಷ್ಟು ಕಡಿಮೆಯಾಗಿದೆ.

ಗೂಳಿಯ ನಾಗಾಲೋಟಕ್ಕೆ ಹಳೆಯ ದಾಖಲೆ ಪುಡಿಪುಡಿ: ಹೊಸ ಎತ್ತರಕ್ಕೇರಿದ ಸೆನ್ಸೆಕ್ಸ್​, ನಿಫ್ಟಿ!

ಏಂಜಲ್ ಬ್ರೋಕಿಂಗ್ ಲಿಮಿಟೆಡ್‌ನ ಸರಕು ಮತ್ತು ಕರೆನ್ಸಿ ಸಂಶೋಧನೆಯ ಡಿವಿಪಿ ಅನುಜ್ ಗುಪ್ತಾ ಮಾತನಾಡಿ, ಜಾಗತಿಕ ಈಕ್ವಿಟಿ ಮಾರುಕಟ್ಟೆಯಲ್ಲಿನ ಚೇತರಿಕೆ ಮತ್ತು ಕೊರೊನಾ ವೈರಸ್ ಲಸಿಕೆಯ ಸಕರಾತ್ಮಕ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಈ ಕುಸಿತ ಕಂಡುಬಂದಿದೆ ಎಂದು ಹೇಳಿದರು.

ಈ ತಿಂಗಳಲ್ಲಿ ಚಿನ್ನದ ಇಟಿಎಫ್ ಹಿಡುವಳಿಯು 1 ಮಿಲಿಯನ್ ಔನ್ಸ್​​ಗಿಂತಲೂ ಕಡಿಮೆಯಾಗುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಪ್ರವೃತ್ತಿ ಈಗ ಕಡಿಮೆಯಾಗಿದೆ. ಇದರ ಮೇಲಿನ ಸುರಕ್ಷಿತ ಧಾಮದ ಬೇಡಿಕೆಯ ನಿರೀಕ್ಷೆಯು ಮಂಕಾಗಬಹುದು ಎಂದರು.

Last Updated : Nov 24, 2020, 2:51 PM IST

ABOUT THE AUTHOR

...view details