ವಾಷಿಂಗ್ಟನ್:ಚೀನಾದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ್ದಾರೆ.
ಚೀನಾದಿಂದ ಆಮದಾಗುತ್ತಿರುವ ಎಲ್ಲ ಸರಕುಗಳ ಮೇಲಿನ ಸುಂಕ ಹೆಚ್ಚಿಸುವಂತೆ ಟ್ರಂಪ್ ಅವರು ಆದೇಶ ನೀಡಿದ್ದಾರೆ ಎಂದು ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲಿಟ್ಜರ್ ಹೇಳಿದ್ದಾರೆ.
ಚೀನಾದಿಂದ ಆಮದಾಗುತ್ತಿರುವ ₹ 140 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸರಕುಗಳ ಮೇಲಿನ ಆಮದು ಸುಂಕವನ್ನು ಶೇ 10ರಿಂದ ಶೇ 25ಕ್ಕೆ ಹೆಚ್ಚಿಸುವಂತೆ ಸೂಚಿಸಿದ್ದಾರೆ. ಇದಲ್ಲದೆ ಇನ್ನುಳಿದ ₹ 2.10 ಲಕ್ಷ ಕೋಟಿ ಮೌಲ್ಯದ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಪ್ರಕ್ರಿಯೆ ಆರಂಭಿಸುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.
ವಾಣಿಜ್ಯ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ವಾಷಿಂಗ್ಟನ್ನಲ್ಲಿ ನಡೆದ 11ನೇ ಸುತ್ತಿನ ಮಾತುಕತೆಯ ಸಭೆಯ ಯಾವುದೇ ಫಲ ನೀಡಿಲ್ಲ. ಸಂದಾನ ಮಾತುಕತೆ ಮುರಿದುಬಿದ್ದಿಲ್ಲ. ದ್ವಿಪಕ್ಷೀಯ ಒಪ್ಪಂದದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಒಪ್ಪಂದಕ್ಕೆ ಬರುವ ಆಶಾವಾದ ಹೊಂದಿದ್ದೇವೆ ಎಂದು ಚೀನಾ ವಕ್ತಾರ ತಿಳಿಸಿದ್ದಾರೆ.