ಕರ್ನಾಟಕ

karnataka

ETV Bharat / business

ಭಾರತೀಯ ಮಾರುಕಟ್ಟೆಗೆ ಯುಎಸ್​ ಮೂಲದ ಕಂಪನಿಯ ಎಲೆಕ್ಟ್ರಿಕ್​​ ಬೈಕ್​ - ಭಾರತೀಯ ಎಲೆಕ್ಟ್ರಿಕ್​ ವಾಹನಗಳ ಮಾರುಕಟ್ಟೆ

ಏಷ್ಯಾದ ಎಲ್ಲಾ ದೇಶಗಳಿಗೆ ಭಾರತವನ್ನು ತನ್ನ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಕಂಪನಿಯು ಭಾರತದಾದ್ಯಂತ ಡೀಲರ್ ನೆಟ್ವರ್ಕ್​ಅಭಿವೃದ್ಧಿಪಡಿಸಲು ಕಾರ್ಯನಿರ್ವಹಿಸುತ್ತಿದೆ..

sds
ಎಲೆಕ್ಟ್ರಿಕ್​​ ಬೈಕ್

By

Published : Jan 5, 2022, 3:47 PM IST

ನವದೆಹಲಿ :ಭಾರತೀಯ ಎಲೆಕ್ಟ್ರಿಕ್​ ವಾಹನಗಳ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಯುಎಸ್ ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟಪ್ ಕಂಪನಿ 'ನಿಕೊಲೆಲೆಕ್ಟ್ರಿಕ್ ಒಟೊಮೊಬಿಲ್' (Nikolaelektric Otomobil) ಎಲೆಕ್ಟ್ರಿಕ್​​ ಬೈಕ್‌ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಈ ವರ್ಷದ ಜನವರಿ ತಿಂಗಳ ಅಂತ್ಯದಲ್ಲಿ ಕಂಪನಿ ತನ್ನ ಮೊದಲ ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್​ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ನಿಕೊಲೆಲೆಕ್ಟ್ರಿಕ್ ಈಗಾಗಲೇ ಭಾರತದಲ್ಲಿ ತನ್ನ ಅಂಗಸಂಸ್ಥೆ ಸ್ಥಾಪಿಸಿದೆ.

ಏಷ್ಯಾದ ಎಲ್ಲಾ ದೇಶಗಳಿಗೆ ಭಾರತವನ್ನು ತನ್ನ ಕೇಂದ್ರವನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಕಂಪನಿಯು ಭಾರತದಾದ್ಯಂತ ಡೀಲರ್ ನೆಟ್ವರ್ಕ್​ಅಭಿವೃದ್ಧಿಪಡಿಸಲು ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ: ಆರ್​​​ಬಿಐಗೆ ಹೊಸ ಕಾರ್ಯಕಾರಿ ನಿರ್ದೇಶಕರ ನೇಮಕ: ಆ ಹೊಸ ಮುಖಗಳ್ಯಾರು?

ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಬ್ರ್ಯಾಂಡ್‌ನ CTO ಕ್ರಿಸ್ಟೋಫರ್ ಎಮೆರಿ, ತಂತ್ರಜ್ಞಾನವು ಯಾವಾಗಲೂ ವಿಕಸನಗೊಳ್ಳುತ್ತದೆ. ಅದರ ವಿಸ್ತರಣೆಯೊಂದಿಗೆ, ನಾವು ಇಂದು ಮಾರುಕಟ್ಟೆಯಲ್ಲಿ ಸಾಕಷ್ಟನ್ನು ಎದುರು ನೋಡಬೇಕಾಗಿದೆ ಎಂದಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಶೇ.100ರಷ್ಟು ಎಫ್‌ಡಿಐಯನ್ನು ಮಾಡಬಹುದಾಗಿದೆ. ದೇಶದ ಮಹತ್ವಾಕಾಂಕ್ಷೆಯ ಗುರಿಗಳ ಹೊರತಾಗಿಯೂ, ಭಾರತದ ಎಲೆಕ್ಟ್ರಿಕ್​ ವಾಹನಗಳ ಸ್ಪೇಸ್ ಆರಂಭಿಕ ಹಂತದಲ್ಲಿದೆ. ವಿಶೇಷವಾಗಿ ದ್ವಿಚಕ್ರ ವಾಹನ ವಿಭಾಗದಲ್ಲಿ ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

For All Latest Updates

ABOUT THE AUTHOR

...view details