ನವದೆಹಲಿ:ಮಹಾಮಾರಿ ಕೊರೊನಾ ವೈರಸ್ ನಡುವೆ ದೇಶದ ಆರ್ಥಿಕತೆ ಚೇತರಿಕೆ ಹಾಗೂ ರಕ್ಷಣಾ ವಲಯಕ್ಕೆ 2021-22ನೇ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಗಡಿಯಲ್ಲಿ ಮೇಲಿಂದ ಮೇಲೆ ಕಾಲು ಕೆದರಿ ಜಗಳಕ್ಕೆ ಬರುವ ಚೀನಾ - ಪಾಕ್ಗೆ ತಿರುಗೇಟು ನೀಡಲು ಭಾರತ ಸಂಪೂರ್ಣವಾಗಿ ಸಜ್ಜುಗೊಳ್ಳುತ್ತಿದ್ದು, ಅದಕ್ಕಾಗಿ ರಕ್ಷಣಾ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ.
ಇದನ್ನೂ ಓದಿ:ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ: ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಗಗನಮುಖಿ!
ಈ ಸಲದ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಬರೋಬ್ಬರಿ 4,78,195.62 ಕೋಟಿ ರೂ ಮೀಸಲಿಡಲಾಗಿದ್ದು, ಕಳೆದ ವರ್ಷ 3.37 ಲಕ್ಷ ಕೋಟಿ ರೂ ಇತ್ತು. ವಿಶೇಷವಾಗಿ ಗೃಹ ಇಲಾಖೆಗೆ 1.66 ಲಕ್ಷ ಕೋಟಿ ರೂ ಅನುದಾನ ನೀಡಲಾಗಿದೆ. ಇದರಲ್ಲಿ ತುರ್ತು ಬಳಕೆಗಾಗಿ 20.776 ಕೋಟಿ ರೂ ಮೀಸಲಿಡಲಾಗಿದೆ.
ಕಳೆದ ವರ್ಷದ ಬಜೆಟ್ಗೆ ಹೊಲಿಕೆ ಮಾಡಿದಾಗ ಈ ಸಲದ ರಕ್ಷಣಾ ಬಜೆಟ್ ಶೇ. 7.34ರಷ್ಟು ಹೆಚ್ಚಿನ ಅನುದಾನ ನೀಡಲಾಗಿದೆ.