ಕರ್ನಾಟಕ

karnataka

ETV Bharat / business

ಕಿ.ಮೀ., ಗಂಟೆ ಲೆಕ್ಕದಲ್ಲಿ 24x7 ಆಟೋ ಬಾಡಿಗೆ ಒದಗಿಸಲಿರುವ ಉಬರ್​​: ದರವೆಷ್ಟು ಗೊತ್ತೆ?

ಗರಿಷ್ಠ ಒಂದು ಗಂಟೆ / ಹತ್ತು ಕಿ.ಮೀ ಪ್ಯಾಕೇಜ್‌ಗೆ 169 ರೂ.ಯಿಂದ ಶುಲ್ಕ ಪ್ರಾರಂಭವಾಗುತ್ತದೆ, ಗರಿಷ್ಠ ಎಂಟು ಗಂಟೆಗಳ ಪ್ಯಾಕೇಜ್‌ ಆಯ್ಕೆ ಮಾಡಿ, ಗರಿಷ್ಠ ಎಂಟು ಗಂಟೆಗಳವರೆಗೆ ಕಾಯ್ದಿರಿಸಬಹುದು ಎಂದು ಉಬರ್​ ಪ್ರಕಟಣೆಯಲ್ಲಿ ಹೇಳಿದೆ.

Uber
ಉಬರ್

By

Published : Aug 26, 2020, 3:08 PM IST

ಬೆಂಗಳೂರು: ವಾಹನ ಚಾಲಕ ಸೇವೆಯ ಉಬರ್ ಭಾರತದಲ್ಲಿ ಬೇಡಿಕೆಯ 24x7 ಆಟೋ ಬಾಡಿಗೆ ಸೇವೆ ಪ್ರಾರಂಭಿಸಿದೆ.

ಈ ಸೇವೆಯು ಪ್ರಯಾಣಿಕರಿಗೆ ಹಲವು ಗಂಟೆಗಳ ಕಾಲ ಆಟೋ ಮತ್ತು ಅದರ ಡ್ರೈವರ್ ಅನ್ನು ಸ್ವತಂತ್ರವಾಗಿ ಕಾಯ್ದಿರಿಸಲು ಅವಕಾಶ ನೀಡುತ್ತದೆ ಎಂದು ಉಬರ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೇವೆಯನ್ನು ಪ್ರಸ್ತುತ ಬೆಂಗಳೂರಿನಲ್ಲಿ ಜಾರಿಗೆ ತರುತ್ತಿದೆ. ದೆಹಲಿ ಎನ್‌ಸಿಆರ್, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆಯಲ್ಲಿ ಲಭ್ಯವಿದೆ ಹೇಳಿದೆ.

ಗರಿಷ್ಠ ಒಂದು ಗಂಟೆ / ಹತ್ತು ಕಿ.ಮೀ ಪ್ಯಾಕೇಜ್‌ಗೆ 169 ರೂ.ಯಿಂದ ಶುಲ್ಕ ಪ್ರಾರಂಭವಾಗುತ್ತದೆ. ಗರಿಷ್ಠ ಎಂಟು ಗಂಟೆಗಳ ಪ್ಯಾಕೇಜ್‌ ಆಯ್ಕೆಯನ್ನು ಎಂಟು ಗಂಟೆಗಳವರೆಗೆ ಕಾಯ್ದಿರಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಿದೆ.

ಹೊಸ ಸೇವೆಯ ಕುರಿತು ಪ್ರತಿಕ್ರಿಯಿಸಿದ ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಮಾರುಕಟ್ಟೆ ಮುಖ್ಯಸ್ಥ ನಿತೀಶ್ ಭೂಷಣ್, ಇದು ಭಾರತದ ಮೊದಲ ಆವಿಷ್ಕಾರ ಮತ್ತು ಸವಾರರು ಹಾಗೂ ಚಾಲಕರಿಗೆ ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಹೇಗೆ ಹತೋಟಿಗೆ ತರುತ್ತೇವೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ ಎಂದರು.

ABOUT THE AUTHOR

...view details