ನವದೆಹಲಿ: ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಕಂಪನಿ ತನ್ನ ಮೋಟಾರ್ ಸೈಕಲ್ ಮಾದರಿ ಅಪಾಚೆ ಆರ್‌ಟಿಆರ್ 160 4ವಿಯ 2021 ಆವೃತ್ತಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಇದರ ಬೆಲೆ 1,07,270 (ಎಕ್ಸ್‌ಶೋರೂಂ ದೆಹಲಿ) ರೂ.ನಷ್ಟು ನಿಗದಿಪಡಿಸಿದೆ.
17.63 ಪಿಎಸ್ ಶಕ್ತಿ ಹೊರಸೂಸುವ 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಬೈಕ್, ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಡಿಸ್ಕ್ ಬ್ರೇಕ್ ಆವೃತ್ತಿಯ ಬೆಲೆ 1,10,320 ರೂ. ಮತ್ತು ಡ್ರಮ್ ಬ್ರೇಕ್ ಮಾಡಲ್ಗೆ 1,07,270 ರೂ. (ಎಕ್ಸ್ ಶೋರೂಮ್ ದೆಹಲಿ ) ಇರಲಿದೆ ಎಂದು ಟಿವಿಎಸ್ ಮೋಟಾರ್ ಕಂಪನಿ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.