ವಾಷಿಂಗ್ಟನ್: ಕೊರೊನಾದಿಂದಾಗಿ ತಮ್ಮ ಉತ್ಪಾದಕ ಘಟಕಗಳನ್ನು ಚೀನಾದಿಂದ ಬೇರೆ ದೇಶಗಳಿಗೆ ಸ್ಥಳಾಂತರ ಮಾಡಲಿರುವ ಅಮೆರಿಕ ಮೂಲದ ಕಂಪನಿಗಳಿಗೆ ಹೆಚ್ಚು ತೆರಿಗೆ ವಿಧಿಸುವ ಎಚ್ಚರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.
ಕೋವಿಡ್-19 ನಿಂದಾಗಿ ಆ್ಯಪಲ್ ಸೇರಿದಂತೆ ಹಲವು ಕಂಪನಿಗಳು ಚೀನಾದಿಂದ ಭಾರತ, ಐರ್ಲ್ಯಾಂಡ್‌ನಂತಹ ದೇಶಗಳಿಗೆ ಸ್ಥಳಾಂತರಗೊಳಿಸಲು ಸಿದ್ಧತೆಗಳು ನಡೆಸುತ್ತಿವೆ.
ಈ ಸಂಬಂಧ ಅಂತಾರಾಷ್ಟ್ರೀಯ ಬ್ಯುಸಿನೆಸ್ ನ್ಯೂಸ್ ಸಂಸ್ಥೆಗೆ ಸಂದರ್ಶನ ನೀಡಿರುವ ಟ್ರಂಪ್, ಸ್ವದೇಶಿ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಗೆ ಮರಳಿ ತಂದರೆ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ, ಆ್ಯಪಲ್ ಕಂಪನಿ ಚೀನಾದಿಂದ ಭಾರತಕ್ಕೆ ಹೋಗುತ್ತಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಒಂದು ವೇಳೆ, ಆ್ಯಪಲ್ ಕಂಪನಿ ಭಾರತಕ್ಕೆ ಹೋದರೆ ಇದರೊಂದಿಗಿನ ಸಂಪರ್ಕವನ್ನು ಸ್ವಲ್ಪ ಮಟ್ಟಿಗೆ ಕಡಿತ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಇದು ಇತರ ಕಂಪನಿಗಳೊಂದಿಗೆ ಸ್ಪರ್ಧೆಯೊಡ್ಡುತ್ತದೆ. ಮುಂದಿನ ದಿನಗಳಲ್ಲಿ ದೇಶಕ್ಕೆ ವಾಪಸ್ ಬರಲು ಸಹ ಕಂಪನಿಗೆ ಅವಕಾಶ ನೀಡುವುದಿಲ್ಲ. ಆ್ಯಪಲ್ 100 ರಷ್ಟು ಉತ್ಪಾದನೆಯನ್ನು ಅಮೆರಿಕದಲ್ಲೇ ಮಾಡಬೇಕು ಎಂದು ಟ್ರಂಪ್ ಹೇಳಿದ್ದಾರೆ.