ಕರ್ನಾಟಕ

karnataka

ETV Bharat / business

ಒಂದೇ ದಿನ 28,650 ರೂ.ಹೆಚ್ಚಿಸಿಕೊಂಡ ಬಿಟ್‌ಕಾಯಿನ್‌.. - ಬೈನಾನ್ಸ್‌, ಇಥೆರಿಯಮ್‌, ಕಾರ್ಡನೊ ಬೆಲೆ

Top cryptocurrency prices today : ಡಿಜಿಟಲ್‌ ಕರೆನ್ಸಿ ಬಿಟ್‌ಕಾಯಿನ್‌ ಇಂದು ಮಾರುಕಟ್ಟೆಯಲ್ಲಿ ಏರುಗತಿಯಲ್ಲಿದೆ. ಒಂದಿನ ದಿನ ಒಂದು ಕಾಯಿನ್‌ ಬೆಲೆಯಲ್ಲಿ 28,650 ರೂಪಾಯಿ ಏರಿಕೆ ಕಂಡು ವಹಿವಾಟು ನಡೆಸುತ್ತಿದೆ. ಇತರೆ ಕ್ರಿಪ್ಟೋ ಕರೆನ್ಸಿಗಳಾದ ಬೈನಾನ್ಸ್‌, ಇಥೆರಿಯಮ್‌ ಹಾಗೂ ಕಾರ್ಡನೊ ಕೂಡ ಲಾಭದಲ್ಲಿವೆ..

Top cryptocurrency prices today
ಒಂದೇ ದಿನ 28,650 ರೂ.ಹೆಚ್ಚಿಸಿಕೊಂಡ ಬಿಟ್‌ಕಾಯಿನ್‌..

By

Published : Dec 7, 2021, 1:38 PM IST

ನವದೆಹಲಿ :ಹೂಡಿಕೆದಾರರು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಟೋಕನ್‌ಗಳ ಖರೀದಿಗೆ ಮುಂದಾದ ಪರಿಣಾಮ ಇಂದು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಜಿಗಿತ ಕಂಡಿದೆ.

ಜಗತ್ತಿನಾದ್ಯಂತ ಕೋವಿಡ್‌ನ ರೂಪಾಂತರಿ ಒಮಿಕ್ರಾನ್‌ ಭೀತಿಯಿಂದಾಗಿ ಹೂಡಿಕೆದಾರರು ತಮ್ಮ ಅಪಾಯಕಾರಿ ಸ್ವತ್ತುಗಳ ಮಾರಾಟಕ್ಕೆ ಮುಂದಾದರು. ಇದರ ಹೊರತಾಗಿಯೂ ಬಿಟ್‌ಕಾಯಿನ್ 50,000 ಡಾಲರ್‌ನಲ್ಲಿ (37,68,664 ರೂ.) ವ್ಯವಹಾರ ನಡೆಸುತ್ತಿದೆ.

ಅಗ್ರ 10 ಡಿಜಿಟಲ್ ಕಾಯಿನ್ಸ್‌ನ ಎಲ್ಲಾ ಇತರ ಒಂಬತ್ತು ಕ್ರಿಪ್ಟೋಕರೆನ್ಸಿಗಳು ಹೆಚ್ಚಿನ ವಹಿವಾಟು ನಡೆಸುತ್ತಿವೆ. ಬೈನಾನ್ಸ್‌ ಕಾಯಿನ್‌ ಶೇ.8 ಲಾಭಗಳಿಸಿದರೆ, ನಂತರದ ಸ್ಥಾನದಲ್ಲಿ ಇಥೆರಿಯಮ್‌ ಹಾಗೂ ಕಾರ್ಡನೊ ಪ್ರತಿ ಶೇ. 5 ಗಳಿಸಿತು.

ಕಳೆದ ದಿನಕ್ಕೆ ಹೋಲಿಸಿದರೆ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕ್ಯಾಪ್ ಸುಮಾರು 5 ಪ್ರತಿಶತದಷ್ಟು $ 2.37 ಟ್ರಿಲಿಯನ್‌ಗೆ ಜಿಗಿದಿದೆ. ಏತನ್ಮಧ್ಯೆ, ಒಟ್ಟು ಕ್ರಿಪ್ಟೋ ಮಾರುಕಟ್ಟೆಯ ಪ್ರಮಾಣವು 14 ಪ್ರತಿಶತದಷ್ಟು $ 137.77 ಶತಕೋಟಿಗೆ ಏರಿತು.

ಇದನ್ನೂ ಓದಿ:Gold Price Today : ಚಿನಿವಾರ ಪೇಟೆಯಲ್ಲಿ ಇಂದಿನ ಚಿನ್ನ, ಬೆಳ್ಳಿ ದರಗಳು..

ABOUT THE AUTHOR

...view details