ನವದೆಹಲಿ:ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿ ಐಫೋನ್ಗೆ ಸೆಡ್ಡು ಹೊಡೆದಿದ್ದ ಒನ್ಪ್ಲಸ್ ಮತ್ತೊಂದು ಹೊಸ ಮೊಬೈಲ್ನೊಂದಿಗೆ ಮಾರ್ಕೆಟ್ಗೆ ಮರಳುತ್ತಿದೆ.
ಒನ್ಪ್ಲಸ್ ಸಂಸ್ಥೆ ಟಿವಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವ ವೇಳೆಯಲ್ಲೇ ಒನ್ಪ್ಲಸ್ 7T ಮೊಬೈಲ್ ರಿಲೀಸ್ ಮಾಡುವ ಘೋಷಣೆ ಮಾಡಿದೆ. ಜೊತೆಗೆ ಮೊಬೈಲ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.
ಒನ್ಪ್ಲಸ್ ಸಂಸ್ಥೆಯ ಸಿಇಒ ಪೀಟ್ ಲೌ ಟ್ವಿಟರ್ ಮೂಲಕ ಒನ್ಪ್ಲಸ್ 7T ಮೊಬೈಲ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಒನ್ಪ್ಲಸ್ 7T ಮೊಬೈಲ್ನಲ್ಲಿ ಮೂರು ಕ್ಯಾಮರಾ ಇರಲಿದ್ದು, ವಿಶೇಷ ರೀತಿಯಲ್ಲಿ ವಿನ್ಯಾಸಗೊಂಡಿದೆ.
ಈ ವರ್ಷದ ಆರಂಭದಲ್ಲಿ ಒನ್ಪ್ಲಸ್ 7 ಪ್ರೋ ಮಾರುಕಟ್ಟೆ ಪ್ರವೇಶಿಸಿತ್ತು. ಬಹುತೇಕ ಅದೇ ವಿನ್ಯಾಸದಲ್ಲಿ ಒನ್ಪ್ಲಸ್ 7T ಮೊಬೈಲ್ ಸಹ ತಯಾರಾಗಿದೆ. ಅಂದ ಹಾಗೆ ಒನ್ಪ್ಲಸ್ 7T ಮೊಬೈಲ್ ಇದೇ ತಿಂಗಳ 26ರಂದು ಬಿಡುಗಡೆಯಾಗಲಿದೆ.