ಕರ್ನಾಟಕ

karnataka

ETV Bharat / business

ಹೀರೊ, ಮಹೀಂದ್ರಾ, ಮಾರುತಿ ಬಳಿಕ ಟಾಟಾ ಮೋಟಾರ್ಸ್​ ವಾಹನ ದರ ಏರಿಕೆ

2021ರ ಜನವರಿ 01ರಿಂದ ಜಾರಿಗೆ ಬರುವಂತೆ ಎಲ್ಲ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಹೆಚ್ಚಳ ಕಂಡು ಬರಲಿದೆ. ಇನ್ಪುಟ್​ ವೆಚ್ಚದ ಏರಿಕೆಯಿಂದಾಗಿ ದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗಿದೆ ಟಾಟಾ ಮೋಟರ್ಸ್​ ಎಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

Tata Motors
ಟಾಟಾ ಮೋಟಾರ್ಸ್​

By

Published : Dec 22, 2020, 9:20 PM IST

ನವದೆಹಲಿ:ಹೀರೋ ಮೊಟೊಕಾರ್ಪ್, ಮಹೀಂದ್ರಾ, ಮಾರುತಿ ಬಳಿಕ ಆಟೋ ದೈತ್ಯ ಟಾಟಾ ಮೋಟಾರ್ಸ್ 2021ರ ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ.

2021ರ ಜನವರಿ 01ರಿಂದ ಜಾರಿಗೆ ಬರುವಂತೆ ಎಲ್ಲಾ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಹೆಚ್ಚಳ ಕಂಡುಬರಲಿದೆ. ಇನ್ಪುಟ್​ ವೆಚ್ಚದ ಏರಿಕೆಯಿಂದಾಗಿ ದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗಿದೆ ಟಾಟಾ ಮೋಟರ್ಸ್​ ಎಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಇಲ್ಲಿ ತನಕ 3.75 ಕೋಟಿ ಇನ್​​ಕಂ ಟ್ಯಾಕ್ಸ್​ ರಿಟರ್ನ್ಸ್​ ಫೈಲ್​: ತೆರಿಗೆ ಕಟ್ಟೊಕ್ಕೆ ಡಿ.__ ಕಡೇ ದಿನ

ಸರಕು ಮತ್ತು ಇತರ ಇನ್ಪುಟ್ ವೆಚ್ಚಗಳಲ್ಲಿನ ಸ್ಥಿರ ಏರಿಕೆ, ವಿದೇಶೀ ವಿನಿಮಯ ಪ್ರಭಾವ ಮತ್ತು ಬಿಎಸ್ 6 ಮಾನದಂಡಗಳಿಗೆ ವಾಹನಗಳ ಪರಿವರ್ತನೆಯು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ. ಅನಿವಾರ್ಯವಾಗಿ ದರ ಹೆಚ್ಚಳದ ಮೊರೆ ಹೋಗಬೇಕಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

ABOUT THE AUTHOR

...view details