ಕರ್ನಾಟಕ

karnataka

ETV Bharat / business

125 ನಗರಗಳಿಗೆ ದಿನಸಿ ಪೂರೈಕೆ ಸೇವೆ ವಿಸ್ತರಿಸಿದ ಸ್ವಿಗ್ಗಿ - ಸ್ವಿಗ್ಗಿ

ಕೊರೊನಾ ಲಾಕ್​ ಡೌನ್​ ಹಿನ್ನೆಲೆ ಅಗತ್ಯ ಸಾಮಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸ್ವಿಗ್ಗಿ ಸಂಸ್ಥೆ ತನ್ನ ಸೇವೆಯನ್ನು ದೇಶದ 125ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ.

Swiggy enables grocery deliveries in over 125 cities
Swiggy enables grocery deliveries in over 125 cities

By

Published : Apr 15, 2020, 2:41 PM IST

ಹೈದರಾಬಾದ್:ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಸೇವೆಯನ್ನು ದೇಶದ 125ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಸ್ವಿಗ್ಗಿ ಸಂಸ್ಥೆ ತಿಳಿಸಿದೆ.

ಸ್ವಿಗ್ಗಿ ಆ್ಯಪ್​ನ ಗ್ರೋಸರಿ (ಕಿರಾಣಿ) ಟ್ಯಾಬ್​ನಲ್ಲಿ ಜನರು ಬೇಕಾದ ದಿನಸಿ ಮತ್ತು ಇತರ ಸಾಮಾಗ್ರಿಗಳನ್ನು ಆರ್ಡರ್​ ಮಾಡಬಹುದು. ಸಮೀಪದ ಮಳಿಗೆಗಳಿಂದ ಸಾಮಗ್ರಿಗಳನ್ನು ಡೆಲಿವರಿ ಬಾಯ್​​ಗಳು ಮನೆ ಬಾಗಿಲಿಗೆ ತಲುಪಿಸುತ್ತಾರೆ ಎಂದು ಸಂಸ್ಥೆ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ ಸಿಇಒ ವಿವೇಕ್ ಸುಂದರ್​, ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಹೈಪರ್​ ಲೋಕಲ್ ಸೇವೆಯ ಮುಖಾಂತರ ಮನೆ ಬಾಗಿಲಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವ ಕೆಲಸವನ್ನು ಮಾಡಲಿದ್ದೇವೆ. ಇದಕ್ಕಾಗಿ ನಾವು ಆಯಾ ಪ್ರದೇಶದ ವ್ಯಾಪಾರ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಜನರಿಗೆ ಬೇಕಾದ ಸಾಮಗ್ರಿಗಳನ್ನು ತಲುಪಿಸಿ, ಅವರು ಮನೆಯಲ್ಲೇ ಇರುವಂತೆ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮ ವಿತರಣಾ ಸಿಬ್ಬಂದಿಗೆ ನೆರವಾಗುತ್ತದೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಸ್ವಿಗ್ಗಿ ಆ್ಯಪ್​ನಲ್ಲಿ ಗ್ರಾಹಕರು ತಮ್ಮ ಸಮೀಪದ ಬೇಕಾದ ಮಳಿಗೆಯಿಂದ ವಸ್ತುಗಳನ್ನು ಆಯ್ಕೆ ಮಾಡಬಹುದು ಮತ್ತು ಅವುಗಳನ್ನು ಕಾರ್ಟ್​ಗೆ ಸೇರಿಸಬಹುದು. ಈ ಸೇವೆಯಲ್ಲಿ ಮುಂಗಡ ಹಣ ಪಾವತಿಸಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

ಸ್ವಿಗ್ಗಿ ರಾಷ್ಟ್ರೀಯ ಬ್ರಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಾದ ಎಚ್‌ಯುಎಲ್, ಪಿ & ಜಿ, ಗೋದ್ರೇಜ್, ಡಾಬರ್, ಮಾರಿಕೊ, ವಿಶಾಲ್ ಮೆಗಾ ಮಾರ್ಟ್, ಅದಾನಿ ವಿಲ್ಮರ್ಸ್, ಸಿಪ್ಲಾ ಮತ್ತು ಇತರ ಮಳಿಗೆಗಳೊಂದಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸಹಭಾಗಿತ್ವವನ್ನು ಹೊಂದಿದೆ.

For All Latest Updates

ABOUT THE AUTHOR

...view details