ಮುಂಬೈ:ಆರ್ಥಿಕ ಕುಸಿತದಿಂದ ಹೊರಬರಲು ಕೇಂದ್ರೀಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಆರೋಗ್ಯ ವೆಚ್ಚ ದ್ವಿಗುಣಗೊಳಿಸುವ ಮತ್ತು ವಿಮಾ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆಯ ಮೇಲಿನ ಮೊತ್ತ ಹೆಚ್ಚಿಸುವ ಯೋಜನೆಗಳನ್ನು ರೂಪಿಸಿದ ನಂತರ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಸೋಮವಾರ ಶೇ 5ರಷ್ಟು ಏರಿಕೆ ದಾಖಲಿಸಿವೆ.
ನಿರ್ಮಲಾ ಬಜೆಟ್ ಘೋಷಣೆ ಬಳಿಕ 2,314 ಅಂಕ ಜಿಗಿದ ಸೆನ್ಸೆಕ್ಸ್!
ಬಜೆಟ್ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 2314.84 ಅಂಕ ಅಥವಾ ಶೇ 5ರಷ್ಟು ಏರಿಕೆ ಕಂಡು 48,600.61 ಅಂಕಗಳಿಗೆ ತಲುಪಿದ್ದರೇ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 646.60 ಅಂಕ ಅಥವಾ ಶೇ 4.74ರಷ್ಟು ಏರಿಕೆ ಕಂಡು 14,281.20 ಅಂಕಗಳಿಗೆ ತಲುಪಿದೆ.
Stock market

ಇಂಡಸ್ಇಂಡ್ ಬ್ಯಾಂಕ್ ಸೆನ್ಸೆಕ್ಸ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ಸರ್ವ್, ಎಸ್‌ಬಿಐ, ಡಾ. ರೆಡ್ಡಿಸ್, ಟೆಕ್, ಐಟಿಸಿ, ಭಾರ್ತಿ ಏರ್ಟೆಲ್, ಕೊಟಾಕ್ ಬ್ಯಾಂಕ್ ಇವೆ. ಮಹೀಂದ್ರಾ ಮತ್ತು ಎಚ್‌ಯುಎಲ್ ಟಾಪ್ ಲೂಸರ್ಗಳಾದವು.