ನವದೆಹಲಿ: ಟೆಲಿಕಾಂ ಇಂಡಸ್ಟ್ರಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 77,815 ಕೋಟಿ ರೂ. ತರಂಗಾಂತರ ಖರೀದಿಯಾಗಿದ್ದು, ರಿಯಲಯ್ಸ್ ಜಿಯೋದಿಂದ ಬರೋಬ್ಬರಿ 57,122.65 ಕೋಟಿ ರೂ.ಸ್ಪೆಕ್ಟ್ರಮ್ ಖರೀದಿಯಾಗಿದೆ.
ಮುಂದಿನ ಐದು ವರ್ಷಗಳಿಗಾಗಿ ನಿನ್ನೆಯಿಂದ ಆರಂಭಗೊಂಡಿದ್ದ ಟೆಲಿಕಾಂ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಇದೀಗ ಕೊನೆಗೊಂಡಿದ್ದು, ಒಟ್ಟು 77,814.80 ಕೋಟಿ ರೂ.ಗಳ ಏರ್ವೇವ್ ಖರೀದಿಯಾಗಿದೆ. ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಹೆಚ್ಚಿನ ತರಂಗಾಂತರ ಪಡೆದುಕೊಂಡಿದೆ.
ಇದನ್ನೂ ಓದಿ: ಸ್ಪೆಕ್ಟ್ರಮ್ ಹರಾಜು: ಮೊದಲ ದಿನ 77,164 ಕೋಟಿ ರೂ. ಜೇಬಿಗಿಳಿಸಿಕೊಂಡ ಕೇಂದ್ರ ಸರ್ಕಾರ
ಎರಡು ದಿನಗಳ ಹರಾಜಿನಲ್ಲಿ 855.60 ಮೆಗಾಹರ್ಟ್ಸ್ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು 77,814.80 ಕೋಟಿಗೆ ಖರೀದಿಸಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್ ತಿಳಿಸಿದ್ದಾರೆ.
ಪ್ರಮುಖವಾಗಿ ರಿಲಯನ್ಸ್ ಜಿಯೋದಿಂದ 57,122.65 ಕೋಟಿ ರೂ.ಗಳ ಸ್ಪೆಕ್ಟ್ರಮ್, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕ್ರಮವಾಗಿ 8,699 ಕೋಟಿ ಮತ್ತು 1,993.40 ಕೋಟಿ ರೂ.ಗಳ ತರಂಗಾಂತರ ಖರೀದಿ ಮಾಡಿವೆ.