ಕರ್ನಾಟಕ

karnataka

ETV Bharat / business

ಸವರನ್ ಗೋಲ್ಡ್​ ಬಾಂಡ್​ ಓಪನ್: ಬಡ್ಡಿ ದರ, ಬಾಂಡ್ ಖರೀದಿಯ ವಿವರ ಹೀಗಿದೆ - Sovereign Gold Bond News

ಪ್ರಸಕ್ತ ಆರ್ಥಿಕ ವರ್ಷದ ಮೇ ತಿಂಗಳಲ್ಲಿ ಸವರನ್ ಗೋಲ್ಡ್ ಬಾಂಡ್ ಅಥವಾ ಎಸ್‌ಜಿಬಿ ಯೋಜನೆ ಘೋಷಿಸಲಾಗಿತು. ಭಾರತೀಯರಿಗಷ್ಟೇ ಈ ಬಾಂಡ್​ಗಳ ಖರೀದಿಗೆ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು, ಚಾರಿಟಬಲ್‌ ಸಂಸ್ಥೆಗಳು ಸಹ ಖರೀದಿಸಬಹುದು.

Sovereign Gold Bonds
ಗೋಲ್ಡ್​​ ಬಾಂಡ್

By

Published : Dec 29, 2020, 3:34 PM IST

Updated : Dec 29, 2020, 3:40 PM IST

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಚಿನ್ನ ನಗದೀಕರಣ ಮತ್ತು ಸವರನ್ ಚಿನ್ನದ ಬಾಂಡ್ ಯೋಜನೆ ಮತ್ತೆ 2020ರ ಕ್ಯಾಲೆಂಡರ್​ ವರ್ಷದ ಕೊನೆಯ ಮಾರಾಟ ಆರಂಭವಾಗಿದೆ.

ಹಳದಿ ಲೋಹವನ್ನು ಕೇವಲ ಹೂಡಿಕೆ ದೃಷ್ಟಿಕೋನದಿಂದ ನೋಡುವ ಖರೀದಿದಾರರು ಭೌತಿಕ ಲೋಹವನ್ನು ಖರೀದಿಸುವುದಕ್ಕಿಂತ ಹೆಚ್ಚಿನ ಅನುಕೂಲಗಳಿಂದಾಗಿ ಈ ಚಿನ್ನದ ಬಾಂಡ್‌ಗಳಿಗೆ ಚಂದಾದಾರರಾಗಬಹುದು.

ಪ್ರಸಕ್ತ ಆರ್ಥಿಕ ವರ್ಷದ ಮೇ ತಿಂಗಳಲ್ಲಿ ಸವರನ್ ಗೋಲ್ಡ್ ಬಾಂಡ್ ಅಥವಾ ಎಸ್‌ಜಿಬಿ ಯೋಜನೆ ಘೋಷಿಸಲಾಗಿತು. ಭಾರತೀಯರಿಗಷ್ಟೇ ಈ ಬಾಂಡ್​ಗಳ ಖರೀದಿಗೆ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು, ಚಾರಿಟಬಲ್‌ ಸಂಸ್ಥೆಗಳು ಸಹ ಖರೀದಿಸಬಹುದು.

9ನೇ ಸರಣಿ ಬಾಂಡ್​ ವಿತರಣೆಯ ಮಹತ್ವದ ದಿನಗಳು

ಸರಣಿ-3 ಚಂದಾದಾರ ದಿನಾಂಕ: ಡಿಸೆಂಬರ್​​ 28​, ವಿತರಣೆಯ ದಿನಾಂಕ: ಜನವರಿ​ 1ರಂದು

ಬೆಲೆ ಮತ್ತು ಪಾವತಿ

ಭಾರತೀಯ ಚಿನ್ನ ಹಾಗೂ ಆಭರಣ ಸಂಘಟನೆ ಪ್ರಕಟಿಸುವ ದರ ಆಧರಿಸಿ ಬಾಂಡ್‌ಗಳ ಬೆಲೆ ನಿಗದಿಪಡಿಸಲಾಗುತ್ತದೆ. ಬಾಂಡ್‌ ಖರೀದಿಸುವ ಸಂದರ್ಭದಲ್ಲಿ ಮಾರುಕಟ್ಟೆಯ ಗ್ರಾಂ. ಚಿನ್ನದ ದರಕ್ಕಿಂದ ₹ 50 ಕಡಿಮೆ ನಿಗದಿ ಮಾಡಲಾಗುತ್ತದೆ.

ಮಾರಾಟ ಆಗುವ ಸ್ಥಳಗಳು

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ), ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್‌) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದಂಥ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಲ್ಲಿ ಖರೀದಿಸಬಹುದು. ಕನಿಷ್ಠ ಒಂದು ಗ್ರಾಂ. ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಬಹುದು. ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ 500 ಗ್ರಾಂ ತನಕ ಖರೀದಿ ಅವಕಾಶವಿದೆ.

ಬಡ್ಡಿ ಮತ್ತು ಬಾಂಡ್ ಅವಧಿ

ಚಿನ್ನದ ಬಾಂಡ್‌ಗಳಿಗೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ಪ್ರತಿ 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಬಾಂಡ್‌ ಅವಧಿ 8 ವರ್ಷಗಳು. ಜತೆಗೆ 5ನೇ ವರ್ಷದಲ್ಲಿ ಯೋಜನೆಯಿಂದ ಹೊರಬರುವ ಅವಕಾಶವಿದೆ.

ತೆರಿಗೆ

ಚಿನ್ನದ ಯೋಜನೆಗಳಿಗೆ ಅನ್ವಯವಾಗುವಂತಹ ಆದಾಯ ತೆರಿಗೆ ಕಾಯ್ದೆ ಚಿನ್ನದ ಬಾಂಡ್​ಗೂ ಅನ್ವಯವಾಗುತ್ತದೆ. ಬಾಂಡ್‌ಗಳು ಗಳಿಸುವ ಬಡ್ಡಿಯನ್ನು ಹೂಡಿಕೆದಾರರ ಗಳಿಕೆಗೆ ಸೇರಿಸಿ, ತೆರಿಗೆ ವಿಧಿಸಲಾಗುತ್ತದೆ.

Last Updated : Dec 29, 2020, 3:40 PM IST

ABOUT THE AUTHOR

...view details