ನವದೆಹಲಿ :ಫ್ಯೂಚರ್ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಮಂಗಳವಾರದ ಪೇಟೆಯಂದು ಪ್ರತಿ ಕೆಜಿ ಮೇಲೆ 1,295 ರೂ. ಏರಿಕೆಯಾಗಿ 55,300 ರೂ.ಗೆ ತಲುಪಿದೆ.
ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ನ ಸೆಪ್ಟೆಂಬರ್ ಮಾಸಿಕದ ಬೆಳ್ಳಿ ಒಪ್ಪಂದದ 18,458 ಲಾಟ್ಗಳಲ್ಲಿ 1,295 ರೂ. ಅಥವಾ ಶೇ 2.4ರಷ್ಟು ಏರಿಕೆಯಾಗಿ ಪ್ರತಿ ಕೆಜಿಯು 55,300 ರೂ.ನಷ್ಟಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಧನಾತ್ಮಕ ಪ್ರವೃತ್ತಿಗಳು ಕಂಡು ಬರುತ್ತಿರುವುದರಿಂದ ಬೆಳ್ಳಿಯ ಬೆಲೆ ಏರಿಕೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್ ಬೆಳ್ಳಿಯು ಶೇ.2.69ರಷ್ಟು ಏರಿಕೆಯಾಗಿ 20.74 ಯುಎಸ್ ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಚಿನ್ನದ ದರದಲ್ಲಿಯೂ ಏರಿಕೆ :ಸ್ಪಾಟ್ ಬೇಡಿಕೆ, ಜಾಗತಿಕ ಸೂಚನೆಗಳು ಸಹ ಚಿನ್ನದ ಫ್ಯೂಚರ್ ಮೇಲೆ ಪರಿಣಾಮ ಬೀರಿದೆ. ಫ್ಯೂಚರ್ ವಹಿವಾಟಿನಲ್ಲಿ ಚಿನ್ನದ ಬೆಲೆ ಮಂಗಳವಾರದಂದು ಪ್ರತಿ 10 ಗ್ರಾಂ. ಮೇಲೆ 159 ರೂ. ಏರಿಕೆಯಾಗಿ 49,186 ರೂ.ಗೆ ತಲುಪಿದೆ. ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್ ಚಿನ್ನದ ಮೇಲೆ ಶೇ.0.31ರಷ್ಟು ಹೆಚ್ಚಳವಾಗಿ 1,823.10 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.