ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆ ಏರಿಕೆ ಸತತ ಎಂಟನೇ ದಿನವೂ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ದರ ಹೆಚ್ಚಳವಾಗಿದ್ದರಿಂದ ಬೆಲೆಗಳ ಏರಿಕೆ ಕಂಡು ಬಂದಿದೆ.
ತೈಲ ಮಾರುಕಟ್ಟೆ ವಿತರಣಾ ಕಂಪನಿಗಳು ಡೀಸೆಲ್‌ನ ಪಂಪ್ ಬೆಲೆಯನ್ನು ಪ್ರತಿ ಲೀಟರ್‌ಗೆ 35 ಪೈಸೆ ಮತ್ತು ಲೀಟರ್ ಪೆಟ್ರೋಲ್ ದರ 30 ಪೈಸೆಯಷ್ಟು ಹೆಚ್ಚಿಸಿವೆ. ಈ ಹೆಚ್ಚಳದಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಈಗ ಲೀಟರ್‌ಗೆ 89.29 ರೂ. ಮತ್ತು ಡೀಸೆಲ್ 79.70 ರೂ.ಯಲ್ಲಿ ಮಾರಾಟ ಆಗುತ್ತಿದೆ.
ಕಳೆದ ಏಳು ದಿನಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2.36 ರೂ.ಗಳಷ್ಟು ಹೆಚ್ಚಳವಾಗಿದ್ದರೇ ಡೀಸೆಲ್ ದರ ಲೀಟರ್ ಮೇಲೆ 2.91 ರೂ.ಯಷ್ಟು ಏರಿಕೆಯಾಗಿದೆ. ದೇಶಾದ್ಯಂತ ಪೆಟ್ರೋಲ್ ಬೆಲೆ ಹೆಚ್ಚಳವು ಪ್ರತಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸ್ಥಳೀಯ ತೆರಿಗೆಗಳ ಮಟ್ಟವನ್ನು ಅವಲಂಬಿಸಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 26 - 32 ಪೈಸೆ ಮತ್ತು ಡೀಸೆಲ್ ಮೇಲೆ 30-35 ಪೈಸೆಗಳವರೆಗೆ ಹೆಚ್ಚಳವಾಗಿರಲಿದೆ.