ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಹಣಕಾಸು ವಿಭಾಗದ ಷೇರುಗಳ ವೃದ್ಧಿಯಿಂದ ಬೆಂಚ್ಮಾರ್ಕ್ ಸೆನ್ಸೆಕ್ಸ್ 364 ಅಂಕ ಜಿಗಿದಿದೆ.
30 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 346.55 ಅಂಕಗಳಷ್ಟು ಹೆಚ್ಚಳವಾಗಿ 49,225.09 ಅಂಗಳಷ್ಟಾಗಿತ್ತು. ಮಧ್ಯಾಹ್ನ 12 ಗಂಟೆಯ ವೇಳೆಗೆ 129 ಅಂಕ ಇಳಿಕೆಯಾಗಿ 48749.33 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಅಂತೆಯೇ, ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ಆರಂಭಿಕವಾಗಿ 88.40 ಅಂಕ ಏರಿಕೆ ಕಂಡು 14,460.30 ಮಟ್ಟದಲ್ಲಿತ್ತು. ಮಧ್ಯಾಹ್ನದ ವೇಳೆಗೆ 9 ಅಂಕ ಇಳಿಕೆಯಾಗಿ 14,361ರಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ಪಟ್ಟಿಯಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಪ್ರಮುಖ ಲಾಭ ಗಳಿಸಿದ್ದರೇ ಆರ್‌ಐಎಲ್, ಪವರ್‌ಗ್ರಿಡ್, ಏಷ್ಯಾನ್ ಪೆಯಿಂಟ್ಸ್, ಒಎನ್‌ಜಿಸಿ ಮತ್ತು ಐಟಿಸಿ ಪ್ರಮುಖ ಟಾಪ್ ಲೂಸರ್ಗಳಾದರು.
ಇದನ್ನೂ ಓದಿ: ಗರಿಷ್ಠ ಮಟ್ಟ ತಲುಪಿದ ಇಂಧನ ಬೆಲೆ: ಕೇಂದ್ರದ ವಿರುದ್ಧ ರಾಗಾ ವಾಗ್ದಾಳಿ
ಶುಕ್ರವಾರದಂದು ಬಿಎಸ್ಇ ಸೆನ್ಸೆಕ್ಸ್ 746.22 ಅಂಕ ಕುಸಿದು 48,878.54ಕ್ಕೆ ತಲುಪಿತ್ತು. ಇದು ಒಂದು ತಿಂಗಳಲ್ಲಿ ತನ್ನ ಅತಿದೊಡ್ಡ ಕುಸಿತ ದಾಖಲಿಸಿತ್ತು. ನಿಫ್ಟಿ ಕೂಡ 218.45 ಅಂಕ ಇಳಿಕೆಯಾಗಿ 14,371.90 ಅಂಕಗಳಲ್ಲಿ ಕೊನೆಗೊಂಡಿತ್ತು. ಅದೇ ದಿನದ ಸೆನ್ಸೆಕ್ಸ್ ಮೊದಲ ಬಾರಿಗೆ 50 ಸಾವಿರ ಗಡಿ ದಾಟಿ ದಾಖಲೆ ನಿರ್ಮಿಸಿತ್ತು.
ಮಾಸಿಕ ಉತ್ಪನ್ನಗಳ ಅವಧಿ, ತ್ರೈಮಾಸಿಕ ಗಳಿಕೆ ಮತ್ತು ಮುಂಬರುವ ಕೇಂದ್ರ ಬಜೆಟ್ ಮಧ್ಯೆ ಈ ವಾರದಲ್ಲಿ ಮಾರುಕಟ್ಟೆಗಳು ಚಂಚಲವಾಗಿ ಉಳಿಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಗಣರಾಜ್ಯೋತ್ಸವದ ರಜಾದಿನ ಪ್ರಯುಕ್ತ ಭಾರತೀಯ ಷೇರು ಮಾರುಕಟ್ಟೆಗಳು ಮಂಗಳವಾರ ಮುಚ್ಚಲಿವೆ.