ಮುಂಬೈ: ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳಲ್ಲಿನ ಆರೋಗ್ಯಕರ ಖರೀದಿಯ ಹಿನ್ನೆಲೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 995 ಅಂಶಗಳ ಏರಿಕೆ ಕಂಡು 31,605.22ಕ್ಕೆ ತಲುಪಿದೆ.
ಗಗನಕ್ಕೇರಿದ ಬ್ಯಾಂಕಿಂಗ್, ಹಣಕಾಸು ಷೇರು ಮೌಲ್ಯ: ಸೆನ್ಸೆಕ್ಸ್ 995 ಅಂಕ ಜಿಗಿತ - ಇಂದಿನ ಸೆನ್ಸೆಕ್ಸ್
ಬುಧವಾರದ ಆರಂಭಿಕ ವಹಿವಾಟಿನ ನಂತರ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆ ಕಂಡವು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ- 50 285.90 ಅಂಶ ಅಥವಾ ಶೇ 3.17ರಷ್ಟು ಏರಿಕೆ ಕಂಡು 9,314.95 ಅಂಶಗಳಿಗೆ ತಲುಪಿದೆ. ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 995 ಅಂಶಗಳ ಏರಿಕೆಯೊಂದಿಗೆ 31,605 ಅಂಕಗಳಿಗೆ ತಲುಪಿದೆ.

ಎಸ್ & ಪಿ ಬಿಎಸ್ಇ ಬ್ಯಾಂಕಿಂಗ್ ವಲಯದ ಸೂಚ್ಯಂಕ ಶೇ 7.31ರಷ್ಟು ಮತ್ತು ಹಣಕಾಸು ವಲಯದ ಸೂಚ್ಯಂಕವು ಶೇ 5.64ರಷ್ಟು ಹೆಚ್ಚಾಗಿದೆ. ಆಕ್ಸಿಸ್ ಬ್ಯಾಂಕ್ ಶೇ 13ರಷ್ಟು ಮತ್ತು ಐಸಿಐಸಿಐ ಬ್ಯಾಂಕ್ ಶೇ 9ರಷ್ಟು ಗಳಿಸಿ ಅಗ್ರಸ್ಥಾನದಲ್ಲಿದ್ದವು. ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಶೇ 5ರಷ್ಟು ಏರಿಕೆ ಕಂಡವು.