ಮುಂಬೈ:ಬುಧವಾರದ ಷೇರುಪೇಟೆಗಳು ಆರಂಭಿಕ ವಹಿವಾಟಿನಲ್ಲಿ ಕಂಡುಕೊಂಡಿದ್ದ ಏರಿಕೆಯನ್ನು ಅಂತ್ಯದವರೆಗೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಕರಾತ್ಮಕ ಅಂತ್ಯ ಕಂಡಿವೆ.
ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ನಂತಹ ಹಣಕಾಸು ಷೇರುಗಳ ಖರೀದಿಯ ಮಧ್ಯೆ ಬೆಂಚ್‌ಮಾರ್ಕ್ ಸೂಚ್ಯಂಕಗಳು ಶೇ 2ರಷ್ಟು ಏರಿಕೆಯಾಗಿದೆ. ಇದಲ್ಲದೇ ಸರ್ಕಾರವು ಉದ್ಯಮದೊಂದಿಗಿದೆ. ಕಂಪನಿಗಳು ಹೆಚ್ಚು ಒತ್ತಡದ ಸಮಯದಲ್ಲಿ ಸಾಗುತ್ತಿರುವಾಗ ಹಾನಿಯನ್ನು ಸರಿಪಡಿಸಲು ಸಾಧ್ಯವಾದಷ್ಟು ಕೆಲಸ ಮಾಡುತ್ತವೆ ಎಂಬ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಭರವಸೆಗೆ ಪೇಟೆಯು ಸ್ಪಂದಿಸಿದೆ.
ಎಸ್&ಪಿ ಬಿಎಸ್‌ಇ ಸೆನ್ಸೆಕ್ಸ್ 622 ಅಂಕ ಅಥವಾ ಶೇ 2ಕ್ಕೂ ಅಧಿಕ ಏರಿಕೆಯೊಂದಿಗೆ ಹೆಚ್ಚು 30,819 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಎಚ್‌ಡಿಎಫ್‌ಸಿ (ಶೇ 5.5ಕ್ಕಿಂತ ಹೆಚ್ಚು) ಅಗ್ರ ಲಾಭ ಗಳಿಸಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ (ಶೇ 5ಕ್ಕಿಂತ ಹೆಚ್ಚು), ಎಲ್&ಟಿ (ಶೇ 5 ರಷ್ಟು) ಮತ್ತು ಟಾಟಾ ಸ್ಟೀಲ್ (ಶೇ 4ರಷ್ಟು) ದಿನದ ವಹಿವಾಟಿನಲ್ಲಿ ಗರಿಷ್ಠ ಚೇತರಿಕೆ ಕಂಡವು.
ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 187 ಅಂಕ ಅಥವಾ ಶೇ 2ರಷ್ಟು ಏರಿಕೆಯೊಂದಿಗೆ 9066.55 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು.
ಎಂ&ಎಂ, ಎಚ್‌ಡಿಎಫ್‌ಸಿ, ಎಲ್ಟಿ, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್, ಐಟಿಸಿ, ಕೋಟಕ್ ಬ್ಯಾಂಕ್, ಟೈಟನ್, ಆ್ಯಕ್ಸಿಸ್ ಬ್ಯಾಂಕ್, ಎನ್ಟಿಪಿಸಿ ಹಾಗೂ ಬಜಾಜ್ ಆಟೋ ಗರಿಷ್ಠ ಮೌಲ್ಯದಲ್ಲಿ ಏರಿಕೆ ಕಂಡವು. ಏಷ್ಯಾನ್ ಪೆಯಿಂಟ್ಸ್, ಭಾರ್ತಿ ಏರ್ಟೆಲ್, ಹೀರೋ ಮೊಟೊಕಾರ್ಪೊ ಮತ್ತು ಇಂಡಸ್ ಇಂಡ್ ಬ್ಯಾಂಕ್ ಕನಿಷ್ಠ ಮೌಲ್ಯದ ಕುಸಿತಕ್ಕೆ ಒಳಗಾದವು.