ಮುಂಬೈ:ಬೆಂಚ್‌ಮಾರ್ಕ್ ಸೂಚ್ಯಂಕ ತನ್ನ ನೆಗೆತವನ್ನು ಸತತ ಎರಡನೇ ದಿನಕ್ಕೆ ವಿಸ್ತರಿಸಿದ್ದು, ಶುಕ್ರವಾರ ವಾರಾಂತ್ಯದ ವಹಿವಾಟು ಲಾಭದೊಂದಿಗೆ ಕೊನೆಗೊಳಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನೇತೃತ್ವದ ಕಂಪನಿಯ ನಿವ್ವಳ ಸಾಲ ಮುಕ್ತವಾಗಿದೆ ಎಂದು ಘೋಷಿಸಿದೆ. 2021ರ ಮಾರ್ಚ್ 31ರ ಸಾಲ ಮುಕ್ತವನ್ನು ಮುಂಚಿತವಾಗಿ ಗುರಿ ಸಾಧಿಸಿದೆ. ರಿಲಯನ್ಸ್ ಷೇರುಗಳ ಬೆಲೆಯಲ್ಲಿ ಶೇ 6.5ರಷ್ಟು ಏರಿಕೆ ಕಂಡು 1,764 ರೂ.ಗೆ ತಲುಪಿತು. ಕಂಪನಿಯು 11 ಟ್ರಿಲಿಯನ್ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಈ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ.
ಎಸ್&ಪಿಯ ಬಿಎಸ್ಇ ಸೆನ್ಸೆಕ್ಸ್ ಇಂದು 524 ಅಂಶ ಅಥವಾ ಶೇ 1.53ರಷ್ಟು ಏರಿಕೆ ಕಂಡು 34,732ಕ್ಕೆ ತಲುಪಿದೆ. ಸೂಚ್ಯಂಕದ 30 ಷೇರುಗಳ ಪೈಕಿ 18 ಷೇರುಗಳು ಗ್ರೀನ್ ವಲಯದಲ್ಲಿ ಮತ್ತು ಉಳಿದ 12 ಷೇರುಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಆರ್‌ಐಎಲ್ ಜೊತೆಗೆ ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಭಾರ್ತಿ ಏರ್‌ಟೆಲ್ ಗರಿಷ್ಠ ಲಾಭ ಮಾಡಿಕೊಂಡವು.