ಕರ್ನಾಟಕ

karnataka

ETV Bharat / business

ದಿನದ ಆರಂಭದಲ್ಲೇ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ; ಸೆನ್ಸೆಕ್ಸ್‌ 395 ಅಂಕಗಳ ಜಿಗಿತ - ಷೇರು ಮಾರುಕಟ್ಟೆ

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ದಿನದ ಆರಂಭದಲ್ಲೇ 395 ಅಂಕಗಳ ಏರಿಕೆ ಕಂಡು 55 ಸಾವಿರದ 724ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಕೂಡ 94 ಅಂಕಗಳ ಜಿಗಿತದೊಂದಿಗೆ 16,556ರಲ್ಲಿದೆ.

Sensex up 395 points, currently trading at 55,724; Nifty at 16,556
ದಿನದ ಆರಂಭದಲ್ಲೇ ಷೇರುಪೇಟೆಯಲ್ಲಿ ಗೂಳಿ ಓಟ; ಸೆನ್ಸೆಕ್ಸ್‌ 395 ಅಂಕಗಳ ಜಿಗಿತ

By

Published : Aug 23, 2021, 10:01 AM IST

Updated : Aug 23, 2021, 10:25 AM IST

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 395 ಅಂಕಗಳ ಏರಿಕೆ ಕಂಡಿದ್ದು 55 ಸಾವಿರದ 724ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 94 ಅಂಕಗಳ ಹೆಚ್ಚಳದೊಂದಿಗೆ 16,556 ವಹಿವಾಟು ನಡೆಸುತ್ತಿದೆ.

ಷೇರುಪೇಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆಯಿಂದ ಟಾಟಾ ಸ್ಟೀಲ್‌, ಹೆಚ್‌ಸಿಎಲ್‌ ಆರಂಭದಲ್ಲೇ ಶೇ.2ರಷ್ಟು ಗರಿಷ್ಠ ಗಳಿಕೆ ಕಂಡವು. ಎಸ್‌ಬಿಐ, ಎಲ್‌ ಆ್ಯಂಡ್‌ ಟಿ, ಬಜಾಜ್‌ ಫೈನಾನ್ಸ್‌, ಟೆಕ್‌ ಮಹಿಂದ್ರಾ ಹಾಗೂ ಬಜಾಜ್‌ ಫೈನ್‌ಸರ್ವ್‌ ಕೂಡ ಲಾಭ ಗಳಿಸಿದವು. ಪವರ್ ಗ್ರಿಡ್‌ ಮತ್ತು ಹೆಚ್‌ಯುಎಲ್‌ ನಷ್ಟ ಅನುಭವಿಸಿದವು.

ಕಳೆದ ವಾರಂತ್ಯದಲ್ಲಿ ಸೆನ್ಸೆಕ್ಸ್‌ 300 ಅಂಕಗಳ ಇಳಿಕೆಯೊಂದಿಗೆ 55,329ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ 118 ಅಂಕಗಳ ನಷ್ಟದೊಂದಿಗೆ 16,450ರಲ್ಲಿ ವಹಿವಾಟು ಮುಗಿಸಿತ್ತು. ಇಂದು ಜಾಗತಿಕವಾಗಿ ಜಪಾನ್‌ನ ನಿಕ್ಕಿ 225 ಅಂಕ (ಶೇ.2), ದಕ್ಷಿಣ ಕೊರಿಯಾದ ಕೋಸ್ಪಿ ಶೇ. 1.5ರಷ್ಟು ಏರಿಕೆಯಾಗಿದೆ.

ಇನ್ನು, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 13 ಪೈಸೆ ವೃದ್ಧಿಸಿಕೊಂಡಿದೆ.

Last Updated : Aug 23, 2021, 10:25 AM IST

ABOUT THE AUTHOR

...view details