ಮುಂಬೈ: ಕೊನೆಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 13 ಸಾವಿರದ ಗಡಿಯನ್ನ ದಾಟಿ ಮುನ್ನುಗ್ಗುತ್ತಿದೆ. ಜನವರಿ ಬಳಿಕ ನಿಫ್ಟಿ ಮತ್ತೆ ಭಾರಿ ಏರಿಕೆ ಕಂಡಿದೆ. ಇದೇ ಮೊದಲ ಬಾರಿ ನಿಫ್ಟಿ-50 13 ಸಾವಿರದ ಗಡಿ ದಾಟಿ ಹೊಸ ಎತ್ತರಕ್ಕೆ ಏರಿದೆ. ಕೇವಲ 13 ವ್ಯವಹಾರಿಕ ದಿನಗಳಲ್ಲಿ ನಿಫ್ಟಿ 12 ಸಾವಿರದಿಂದ 13000 ದ ಗಡಿ ದಾಟಿದೆ.
ಓದಿ:ಮಾರುತಿ ಸುಝುಕಿ ಚಂದಾದಾರಿಕೆ ಕಾರ್ಯಕ್ರಮ 4 ನಗರಗಳಿಗೆ ವಿಸ್ತರಣೆ
ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆಗಳು, ಡಾಲರ್ನ ಕುಸಿತ, ಕೊರೊನಾಕ್ಕೆ ಹೊಸ ಲಸಿಕೆ ಇವೆಲ್ಲಕ್ಕಿಂತ ಮುಖ್ಯವಾಗಿ ಜಾಗತಿಕವಾಗಿ ಆಯಾಯ ಕೇಂದ್ರ ಬ್ಯಾಂಕ್ಗಳು ಆರ್ಥಿಕ ಚೇತರಿಕೆ ಹಣದ ಹರಿವನ್ನ ಹೆಚ್ಚಳ ಮಾಡಿರುವುದು ಷೇರುಪೇಟೆ ಏರಿಕೆಗೆ ಕಾರಣವಾಗಿದೆ.