ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ: 600 ಅಂಕಗಳನ್ನು ಕಳೆದುಕೊಂಡ ಸೆನ್ಸೆಕ್ಸ್​; ನಿಫ್ಟಿಯಲ್ಲೂ ಕುಸಿತ - 600 ಅಂಕಗಳನ್ನು ಕಳೆದುಕೊಂಡ ಸೆನ್ಸೆಕ್ಸ್​

30,541.97 ರ ಕನಿಷ್ಠ ಮಟ್ಟವನ್ನು ತಲುಪಿದ ನಂತರ, 30 ಷೇರುಗಳ ಸೂಚ್ಯಂಕವು 581.75 ಅಂಕ ಕಡಿಮೆಯಾಗಿ 30,577.87 ರಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ, NSE ನಿಫ್ಟಿ 169.85 ಅಂಕಗಳನ್ನು ಕಳೆದುಕೊಂಡು 8,942.05 ಕ್ಕೆ ಬಂದು ತಲುಪಿದೆ.

Sensex
ಸೆನ್ಸೆಕ್ಸ್

By

Published : Apr 13, 2020, 11:59 AM IST

ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸುಮಾರು 600 ಅಂಕಗಳ ಕುಸಿತ ಕಂಡಿದೆ. ನಿಫ್ಟಿ 9000 ಅಂಕಕ್ಕಿಂತಲೂ ಕೆಳಗಿಳಿದಿದೆ.

ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್‌ 30,541.97 ರ ಕನಿಷ್ಠ ಮಟ್ಟ ತಲುಪಿದ ನಂತರ, 30 ಷೇರುಗಳ ಸೂಚ್ಯಂಕವು 581.75 ಅಂಕ ಕಡಿಮೆಯಾಗಿ 30,577.87 ರಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ, NSE ನಿಫ್ಟಿ 169.85 ಅಂಕಗಳನ್ನು ಕಳೆದುಕೊಂಡು 8,942.05 ಕ್ಕೆ ಬಂದು ತಲುಪಿದೆ.

ಸೆನ್ಸೆಕ್ಸ್ ಪ್ಯಾಕ್‌ ಗಳಿಕೆಯಲ್ಲಿ ಬಜಾಜ್ ಫೈನಾನ್ಸ್ ಹಿಂದೆಬಿದ್ದಿದ್ದು, ಶೇ. 8 ರಷ್ಟು ಕುಸಿತ ಕಂಡಿದೆ. ಮಹೀಂದ್ರಾ, ಮಾರುತಿ, ಒಎನ್‌ಜಿಸಿ, ಟೈಟಾನ್ ಮತ್ತು ಬಜಾಜ್ ಆಟೋ ನಂತರದ ಸ್ಥಾನದಲ್ಲಿವೆ.

ಮತ್ತೊಂದೆಡೆ, ಭಾರ್ತಿ ಏರ್‌ಟೆಲ್, ಎಲ್ ಆಂಡ್ ಟಿ, ಇನ್ಫೋಸಿಸ್ ಮತ್ತು ಎನ್‌ಟಿಪಿಸಿ ಲಾಭ ಗಳಿಸಿವೆ.

ABOUT THE AUTHOR

...view details