ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ನಕಾರಾತ್ಮಕ ಪ್ರವೃತ್ತಿಯ ಮಧ್ಯೆ ಸೂಚ್ಯಂಕ ಮೇಜರ್ಗಳಾದ ಎಚ್‌ಡಿಎಫ್‌ಸಿ ಟ್ವಿನ್ಸ್, ಇನ್ಫೋಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ನಷ್ಟದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 400 ಅಂಕ ಕುಸಿತ ದಾಖಲಿಸಿದೆ.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕವು 440.84 ಅಂಕ ಅಥವಾ ಶೇ 0.88ರಷ್ಟು ಕಡಿಮೆಯಾಗಿ 49,695.74 ಅಂಕಗಳಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 116.05 ಅಂಕ ಅಥವಾ ಶೇ 0.78ರಷ್ಟು ಕುಸಿದು 14,729.05 ಅಂಕಗಳ ಮಟ್ಟದಲ್ಲಿತ್ತು. ಬೆಳಗ್ಗೆ 11.30ರ ವೇಳೆಗೆ 465.45 ಅಂಕ ಇಳಿಕೆಯಾಗಿ 49671.13 ಅಂಕಗಳ ಮಟ್ಟದಲ್ಲೂ ನಿಫ್ಟಿ 104.70 ಅಂಕ ಕ್ಷೀಣಿಸಿ 14740.40 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ವಿಭಾಗದಲ್ಲಿ ಎಚ್‌ಡಿಎಫ್‌ಸಿ ಟ್ವಿನ್ಸ್, ಟೆಕ್ ಮಹೀಂದ್ರಾ, ಪವರ್‌ಗ್ರಿಡ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಮತ್ತು ಕೊಟಾಕ್ ಬ್ಯಾಂಕ್ ಟಾಪ್ ಲೂಸರ್ಗಳಾದರೇ ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಎನ್‌ಟಿಪಿಸಿ, ಸನ್ ಫಾರ್ಮಾ, ಆಕ್ಸಿಸ್ ಬ್ಯಾಂಕ್ ಮತ್ತು ಮಾರುತಿ ಟಾಪ್ ಗೇನರ್ಗಳಾಗಿದ್ದಾರೆ.
ಇದನ್ನೂ ಓದಿ:ಪಿಡಿಐಎಲ್ನಿಂದ ಲಾಭಾಂಶ ಸ್ವೀಕರಿಸಿದ ಸಚಿವ ಸದಾನಂದ ಗೌಡ
ಹಿಂದಿನ ದಿನದ ವಹಿವಾ ಸೆನ್ಸೆಕ್ಸ್ 1,128.08 ಅಂಕ ಅಥವಾ ಶೇ 2.30ರಷ್ಟು ಹೆಚ್ಚಳವಾಗಿ ಮತ್ತೆ 50 ಸಾವಿರ ಗಡಿ ದಾಟಿತ್ತು. ನಿಫ್ಟಿ ಕೂಡ ಎರಡು ವಾರಗಳ ಗರಿಷ್ಠ ಮಟ್ಟವಾದ 14,845.10 ಅಂಕಗಳಲ್ಲಿ ಕೊನೆಗೊಂಡಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಂಗಳವಾರದ ವಹಿವಾಟಿನಂದು 769.47 ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿ ಮಾಡಿದರು.
ದೇಶೀಯ ಷೇರುಗಳು ಪ್ರಸ್ತುತ ಸಮಯದಲ್ಲಿ ಉತ್ತಮವಾಗಿ ಹೂಡಿಕೆದಾರರ ಗಮನ ಸೆಳೆಯುತ್ತಿಲ್ಲ. ವಿವಿಧ ರಾಜ್ಯ ಸರ್ಕಾರಗಳು ಇತ್ತೀಚೆಗೆ ರಾತ್ರಿ ಕರ್ಫ್ಯೂ ಘೋಷಣೆ ಮಾಡಿದ್ದು, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡುವ ಸೂಚನೆ ಷೇರು ವಹಿವಾಟಿಗೆ ನಕರಾತ್ಮಕವಾಗಿ ಕಾಣಿಸುತ್ತಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಸ್ಟ್ರಾಟಜಿ ಮುಖ್ಯಸ್ಥ ಬಿನೋದ್ ಮೋದಿ ಹೇಳಿದ್ದಾರೆ.
ಏಷ್ಯಾದ ಇತರ ಮಾರುಕಟ್ಟೆಗಳು ಮಧ್ಯಂತರ ವಹಿವಾಟನ ಅವಧಿಯಲ್ಲಿ ಶಾಂಘೈ, ಹಾಂಕಾಂಗ್ ಮತ್ತು ಟೋಕಿಯೊ ಪೇಟೆಗಳು ಕೆಂಪು ಬಣ್ಣದಲ್ಲಿದ್ದರೆ, ಸಿಯೋಲ್ ತುಸು ಮೇಲ್ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ 0.45ರಷ್ಟು ಹೆಚ್ಚಳವಾಗಿ 64.46 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.