ಮುಂಬೈ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಈಕ್ವಿಟಿ ಬೆಂಚ್ಮಾರ್ಕ್ ಸೆನ್ಸೆಕ್ಸ್ 1,100 ಅಂಕಗಳನ್ನು ಕಳೆದುಕೊಂಡಿದೆ. ಕೊರೊನಾ ವೈರಸ್ ಜಗತ್ತನ್ನು ಆರ್ಥಿಕ ಹಿಂಜರಿತಕ್ಕೆ ತಳ್ಳಿದ್ದು, ಜಾಗತಿಕ ಈಕ್ವಿಟಿಗಳಲ್ಲಿ ನಷ್ಟ ಉಂಟಾಗಿದೆ.
ಕೊರೊನಾ ಏಟಿಗೆ ಮತ್ತೆ ಕುಸಿದ ಸೆನ್ಸೆಕ್ಸ್, 1,100 ಅಂಕಗಳ ಇಳಿಕೆ - ಕುಸಿದ ಸೆನ್ಸೆಕ್ಸ್
ಜಾಗತಿಕ ಮಾರುಕಟ್ಟೆಗೆ ಕೊರೊನಾ ಏಟು ನೀಡಿದೆ. ಗೂಳಿ ಆರ್ಭಟಕ್ಕೆ ಕೊರೊನಾ ಮತ್ತೆ ಮತ್ತೆ ಅಡ್ಡಿಪಡಿಸುತ್ತಿದ್ದು, ಮತ್ತೆ ಸೆನ್ಸೆಕ್ಸ್ 1,100 ಅಂಕಗಳ ಇಳಿಕೆ ಕಂಡಿದೆ.
ಸೆನ್ಸೆಕ್ಸ್
ಕೊರೊನಾ ವೈರಸ್ನಿಂದಾಗಿ ಜಗತ್ತು ವಿನಾಶಕಾರಿ ಪರಿಣಾಮವನ್ನು ಎದುರಿಸುತ್ತಿದೆ. ಜಗತ್ತು ಸ್ಪಷ್ಟವಾಗಿ ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
28,708.83 ರ ಕನಿಷ್ಠ ಮಟ್ಟವನ್ನು ತಲುಪಿದ ನಂತರ, 30 ಷೇರುಗಳ ಬಿಎಸ್‌ಇ(ಬಾಂಬೆ ಸ್ಟಾಕ್ ಎಕ್ಸ್ಚೇಂಜ್) ಬಾರೋಮೀಟರ್ 855.82 ಅಂಕ ಕಡಿಮೆಯಾಗಿ 28,959.77ರಲ್ಲಿ ವಹಿವಾಟು ನಡೆಸುತ್ತಿದೆ. ಅಂತೆಯೇ, ಎನ್‌ಎಸ್‌ಇ ನಿಫ್ಟಿ 245.30 ಅಂಕಗಳು ಕುಸಿದು 8,414.95 ಕ್ಕೆ ಬಂದು ತಲುಪಿದೆ.