ಕರ್ನಾಟಕ

karnataka

ETV Bharat / business

1,600ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್... ಲಕ್ಷಾಂತರ ಕೋಟಿ ನಷ್ಟ - 1,000 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿತ ಕಂಡ ಸೆನ್ಸೆಕ್ಸ್

ಎನ್‌ಎಸ್‌ಇ ನಿಫ್ಟಿ 270.40 ಪಾಯಿಂಟ್‌ ಅಥವಾ ಶೇ 1.79 ರಷ್ಟು ಇಳಿಕೆ ಕಂಡು 14,826.95 ಕ್ಕೆ ತಲುಪಿದೆ. ಬಿಎಸ್‌ಇ ಸೂಚ್ಯಂಕವು 1000‬ ಪಾಯಿಂಟ್‌ಗಳ ಇಳಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​​ 50,112.10 ಕ್ಕೆ ವಹಿವಾಟು ನಡೆಸುತ್ತಿದೆ.

Sensex tanks over 1,000 pts
1,000 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿತ ಕಂಡ ಸೆನ್ಸೆಕ್ಸ್

By

Published : Feb 26, 2021, 12:43 PM IST

Updated : Feb 26, 2021, 12:57 PM IST

ಮುಂಬೈ: ಇಂದು ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕವು 1000‬ ಪಾಯಿಂಟ್‌ಗಳ ಇಳಿಕೆ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​​ 50,112.10 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 270.40 ಪಾಯಿಂಟ್‌ ಅಥವಾ ಶೇ 1.79 ರಷ್ಟು ಇಳಿಕೆ ಕಂಡು 14,826.95 ಕ್ಕೆ ತಲುಪಿದೆ.

ಇಂಡೆಸ್‌ಇಂಡ್ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ.3 ರಷ್ಟು ನಷ್ಟ ಅನುಭವಿಸುತ್ತಿದ್ದು, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಎಂ ಆಂಡ್ ಎಂ, ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟೆಕ್ ಮಹೀಂದ್ರಾ ನಂತರದ ಸ್ಥಾನದಲ್ಲಿವೆ.

ನೆಸ್ಲೆ ಇಂಡಿಯಾ, ಮಾರುತಿ, ಎಚ್‌ಯುಎಲ್ ಮತ್ತು ಭಾರತಿ ಏರ್‌ಟೆಲ್ ಏರಿಕೆ ಕಂಡಿವೆ. ಹಿಂದಿನ ವಹಿವಾಟಿನಲ್ಲಿ, ಸೆನ್ಸೆಕ್ಸ್ 51,039.31 ಕ್ಕೆ ಮತ್ತು ನಿಫ್ಟಿ 15,097.35 ಕ್ಕೆ ತಲುಪಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದರು. ಜಾಗತಿಕವಾಗಿ ಬಾಂಡ್ ಮಾರಾಟದ ಹೆಚ್ಚಳ ಮತ್ತು ಹೂಡಿಕೆದಾರರ ಮನೋಭಾವದ ಮೇಲೆ ಹೆಚ್ಚಿನ ಸರಕುಗಳ ಬೆಲೆಗಳ ಪ್ರಭಾವ ಹಣದ ಹರಿವು ಮತ್ತು ಗಳಿಕೆಯ ಭವಿಷ್ಯದ ಮೌಲ್ಯವನ್ನು ಕಡಿಮೆಗೊಳಿಸುತ್ತವೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೆಡ್-ಸ್ಟ್ರಾಟಜಿ ಹೇಳಿದರು.

ಅಮೆರಿಕದ ನಾಸ್ಡಾಕ್​, ಆಸ್ಟ್ರೇಲಿಯಾದ ಎಸ್​​ ಅಂಡ್​ ಪಿ ಮಾರುಕಟ್ಟೆ ಹಾಗೂ ಏಷ್ಯಾದ ಇತರಡೆಗಳಲ್ಲಿ, ಶಾಂಘೈ, ಹಾಂಗ್ ಕಾಂಗ್, ಸಿಯೋಲ್ ಮತ್ತು ಟೋಕಿಯೊಗಳಲ್ಲಿನ ಬೋರ್ಸ್‌ಗಳು ಮಧ್ಯ- ಸೆಷನ್ ಒಪ್ಪಂದಗಳಲ್ಲಿ ಗಮನಾರ್ಹ ನಷ್ಟದೊಂದಿಗೆ ವಹಿವಾಟು ನಡೆಸುತ್ತಿದ್ದವು.

ಏತನ್ಮಧ್ಯೆ, ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ 0.62 ಶೇಕಡಾ ಕಡಿಮೆಯಾಗಿ 65.70 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.

Last Updated : Feb 26, 2021, 12:57 PM IST

ABOUT THE AUTHOR

...view details