ಮುಂಬೈ: ಕಳೆದ ಕೆಲವು ದಿನಗಳಿಂದ ಹೂಡಿಕೆದಾರರಿಗೆ ಹೊಸ ಹುರುಪು ತಂದಿದ್ದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕ ಸೆನ್ಸೆಕ್ಸ್ 550 ಅಂಶ ಹಾಗೂ ನಿಫ್ಟಿ 50 ಅಂಶ ಕುಸಿತ ಕಂಡಿದೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯ ಭಾರಿ ನಷ್ಟ ಅನುಭವಿಸಿದೆ.
ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ ಕಳೆದ ವಾರ ವಿತ್ತ ಸಚಿವೆ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಿದ್ದರು. ಇದು ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿತ್ತು. ಆದರೆ ಇಂದಿನ ವಹಿವಾಟು ಹೂಡಿಕೆದಾರರ ಆತಂಕ ಹೆಚ್ಚಿಸಿತು.