ಮುಂಬೈ:ಜಾಗತಿಕ ಮಾರುಕಟ್ಟೆಗಳ ಋಣಾತ್ಮಕ ಸೂಚನೆಗಳ ಮಧ್ಯೆ ದೇಶೀಯ ಈಕ್ವಿಟಿ ಬೆಂಚ್ಮಾರ್ಕ್ ಸೆನ್ಸೆಕ್ಸ್ ಸೋಮವಾರದ ವಹಿವಾಟಿನಂದು 540 ಅಂಕಗಳಷ್ಟು ಕುಸಿತ ಕಂಡಿದೆ. ಸೂಚ್ಯಂಕದ ಟಾಪ್ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಭಾರಿ ನಷ್ಟ ಕಂಡಿವೆ.
ದಿನದ ವಹಿವಾಟಿನ ಮಧ್ಯಂತರ ಅವಧಿಯಲ್ಲಿ 737 ಅಂಕ ಕುಸಿತದ ಬಿಎಸ್ಇ ಸೂಚ್ಯಂಕವು ಅಂತ್ಯದ ವೇಳೆಗೆ 540 ಅಂಕ ಇಳಿಕೆಯಾಗಿ 40,145.50 ಅಂಕಗಳಿದೆ ತಲುಪಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 162.60 ಅಂಕ ಇಳಿಕೆಯಾಗಿ 11,767.75 ಅಂಕಗಳ ಮಟ್ಟಕ್ಕೆ ತಲುಪಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಹೂಡಿಕೆದಾರರು ತಮ್ಮ ಲಾಭ ಕಾಯ್ದಿರಿಸಿಕೊಳ್ಳಲು ಇಚ್ಛಿಸಿದ್ದರೇ ಮತ್ತೊಂದು ಕಡೆ ಐರೋಪ್ಯ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ದೇಶಿ ಮಾರುಕಟ್ಟೆಯ ಮೇಲೆ ಬೀರಿದ್ದು, ಆಟೋ, ಮೆಟಲ್ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ತೀವ್ರ ನಷ್ಟ ಸಂಭವಿಸಿತು.
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಇನ್ಫೋಸಿಸ್ ಸೆನ್ಸೆಕ್ಸ್ ನಷ್ಟದಲ್ಲಿ ಕೊನೆಗೊಂಡವು. ನೆಸ್ಲೆ ಇಂಡಿಯಾ, ಕೊಟಕ್ ಮಹೀಂದ್ರ ಬ್ಯಾಂಕ್, ಎಚ್ಡಿಎಫ್ಸಿ, ಟಿಸಿಎಸ್, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಹಿಂದೂಸ್ತಾನ ಯುನಿಲಿವರ್ ಷೇರು ಮೌಲ್ಯದಲ್ಲಿ ಏರಿಕೆ ಕಂಡು -ಬಂತು.