ಮುಂಬೈ:ಜಾಗತಿಕ ಷೇರು ಮಾರುಕಟ್ಟೆಯಲ್ಲಿ ದಿನಾರಂಭದಲ್ಲಿ ಕರಡಿ ಕುಣಿತ ಶುರುವಾಗಿದೆ. ಕಳೆದೊಂದು ವಾರದಿಂದ ಸೆನ್ಸೆಕ್ಸ್ನಲ್ಲಿ ಏರಿಕೆ ಕಂಡಿದ್ದ ಷೇರುಪೇಟೆ, ಸೋಮವಾರ ಆರಂಭಿಕ ಹಂತದಲ್ಲೇ ಭಾರಿ ಕುಸಿತ ಕಂಡಿದೆ.
ಏರುಗತಿಯಲ್ಲಿದ್ದ ಮಾರುಕಟ್ಟೆಯಲ್ಲಿ ಕರಡಿ ಕುಣಿತ: 533.07 ಅಂಕ ಕುಸಿದ ಸೆನ್ಸೆಕ್ಸ್! - STOCKS OPEN
ಕಳೆದೊಂದು ವಾರದಿಂದ ಏರಿಕೆ ಕಂಡಿದ್ದ ಷೇರುಪೇಟೆ, ಸೋಮವಾರ ಆರಂಭಿಕ ಹಂತದಲ್ಲೇ ಭಾರಿ ಕುಸಿತ ಕಂಡಿದೆ.
ಷೇರು ಮಾರುಕಟ್ಟೆ
ಸೆನ್ಸೆಕ್ಸ್ 533.07 ಅಂಕಗಳು ಇಳಿಕೆಯಾಗಿ 52,606.99 ರಷ್ಟರಲ್ಲಿ ವಹಿವಾಟು ನಿರತವಾಗಿತ್ತು. ಇನ್ನು ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡಾ 168.90 ಪಾಯಿಂಟ್ ಇಳಿಕೆಯಾಗಿದ್ದು 15,754.50 ರಲ್ಲಿ ವಹಿವಾಟು ಮುಂದುವರಿಸಿದೆ.
ಬಿಎಸ್ಸಿ ಮಿಡ್ ಹಾಗೂ ಸ್ಮಾಲ್ ಕ್ಯಾಪ್ ಷೇರುಗಳ ಬೆಲೆಯಲ್ಲಿ 0.4 ಮತ್ತು 0.3 ರಷ್ಟು ಕುಸಿತ ಕಂಡು ಬಂತು. ಬಹುತೇಕ ಎಲ್ಲ ವರ್ಗದ ಷೇರುಗಳ ಬೆಲೆಯಲ್ಲೂ ರೆಡ್ ಮಾರ್ಕ್ ಕಂಡು ಬಂದಿದೆ.
Last Updated : Jul 19, 2021, 10:10 AM IST