ಮುಂಬೈ: ಸತತ ಮೂರು ದಿನಗಳಿಂದ ಕುಸಿತ ಕಾಣುತ್ತಿರುವ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಇಂದೂ ಸಹ ಆರಂಭಿಕ ವಹಿವಾಟಿನಲ್ಲಿ 250 ಪಾಯಿಂಟ್‌ಗಳಷ್ಟು ಕುಸಿತ ಕಂಡಿದ್ದು, ಇದೀಗ 435 ಪಾಯಿಂಟ್‌ಗಳಷ್ಟು ಕುಸಿತ ಕಾಣುವ ಮುಖೇನ ದಿನದ ವಹಿವಾಟು ಮುಗಿಸಿದೆ.
ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಷೇರುಗಳು ನಷ್ಟವನ್ನು ಅನುಭವಿಸುವ ಮೂಲಕ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಇಂದು ಸಂಜೆ ವೇಳೆಗೆ 435 ಪಾಯಿಂಟ್‌ಗಳಷ್ಟು ಕುಸಿತ ಕಂಡಿದೆ. ಬಿಎಸ್‌ಇ ಸೂಚ್ಯಂಕವು 434.93 ಪಾಯಿಂಟ್ ಅಥವಾ ಶೇ0.85 ರಷ್ಟು ಇಳಿಕೆ ಕಾಣುವ ಮೂಲಕ 50,889.76 ಪಾಯಿಂಟ್ಗೆ ತಲುಪಿದರೆ, ಎನ್ಎಸ್ಇ ನಿಫ್ಟಿ 137.20 ಪಾಯಿಂಟ್ ಅಥವಾ ಶೇ0.91 ರಷ್ಟು ಇಳಿಕೆ ಕಾಣುವ ಮುಖೇನ 14,981.75 ಕ್ಕೆ ತಲುಪಿದೆ.