ಮುಂಬೈ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಬಜೆಟ್ ಮಂಡಿಸಿದ್ದು,ಇದರ ಬೆನ್ನಲ್ಲೇ ಮುಂಬೈ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.
ಸೂಚ್ಯಂಕದಲ್ಲಿ 1601 ಅಂಕ ಏರಿಕೆ ಕಂಡು ಬಂದಿದ್ದು, ನಿಫ್ಟಿಯಲ್ಲಿಯೂ ಏರಿಕೆಯಾಗಿದೆ. ಅಟೊಮೊಬೈಲ್ ಸೆಕ್ಟರ್ಗೆ ಹೆಚ್ಚಿನ ಆದ್ಯತೆ ನೀಡಿರುವುದು ಹಾಗೂ ಬ್ಯಾಂಕ್ ಸೆಕ್ಟರ್ಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವುದು ಈ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಸದ್ಯ ಮುಂಬೈ ಸೂಚ್ಯಂಕ 47,887.43 ಇದ್ದು, ನಿಫ್ಟಿ 13,860 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ. ಇದರ ಜೊತೆಗೆ ಡಾಲರ್ ಎದುರು ರೂಪಾಯಿ 8 ಪೈಸೆಗಳ ಏರಿಕೆ ಕಂಡು ಬಂದಿದೆ.