ಮುಂಬೈ:ಕಳೆದ ಒಂದು ತಿಂಗಳಿಂದ ನಕಾರಾತ್ಮಕ ಮಟ್ಟದಲ್ಲಿರುವ ಮುಂಬೈ ಷೇರು ಪೇಟೆಯು ಕೇಂದ್ರ ಸರ್ಕಾರದ ಆ ಒಂದು ನಡೆಯಿಂದ ಗುರುವಾರದಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಮೈಕೊಡವಿ ಮೇಲೆದ್ದಿದೆ.
ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಮೇಲೆ ಇತ್ತೀಚೆಗೆ ವಿಧಿಸಲಾಗಿದ್ದ ಹೆಚ್ಚಿನ ತೆರಿಗೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂಬ ವರದಿ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಆದೇಶವನ್ನು ಸಂಸತ್ತಿನಲ್ಲಿ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಅಧಿಕಾರಿಯೊಬ್ಬ ಹೇಳಿದ್ದಾರೆ. ಇದರಿಂದ ಮುಂಬೈ ಪೇಟೆಯ ಹೂಡಿಕೆದಾರರಲ್ಲಿ ಅಮಿತೋತ್ಸಾಹ ಕಂಡುಬಂದು ಖರೀದಿ ಪ್ರಕ್ರಿಯೆಯಲ್ಲಿ ಮುಗಿಬಿದ್ದಿದ್ದಾರೆ.