ಕರ್ನಾಟಕ

karnataka

ETV Bharat / business

ಮೊದಲ ಬಾರಿಗೆ 13 ಸಾವಿರ ಗಡಿ ದಾಟಿದ ನಿಫ್ಟಿ: ಸೆನ್ಸೆಕ್ಸ್ ಗೂಳಿ ಹೂಂಕಾರಕ್ಕೆ ಹೂಡಿಕೆದಾರರ ಕುಣಿತ - ಷೇರು ಮಾರುಕಟ್ಟೆ ಕ್ಲೋಸಿಂಗ್ ಬೆಲ್

ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 505.72 ಅಂಕ ಏರಿಕೆಯಾಗಿ 44,655.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 140.10 ಅಂಕ ಜಿಗಿದು 13,109.05 ಅಂಕ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಂಡವು.

Sensex
ಸೆನ್ಸೆಕ್ಸ್​

By

Published : Dec 1, 2020, 5:44 PM IST

ಮುಂಬೈ: ಸತತ ವಿದೇಶಿ ಬಂಡವಾಳದ ಒಳಹರಿವಿನ ಮಧ್ಯೆ ಐಟಿ ಮತ್ತು ಫೈನಾನ್ಸ್ ಷೇರುಗಳ ಲಾಭದ ಬೆಂಬಲದೊಂದಿಗೆ ಸೆನ್ಸೆಕ್ಸ್ ಮಂಗಳವಾರ 506 ಅಂಕಗಳ ಏರಿಕೆಯಿಂದಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಬಲವಾದ ರೂಪಾಯಿ ವಹಿವಾಟು ಮತ್ತು ಸಕಾರಾತ್ಮಕ ಮುನ್ನಡೆ ಕಂಡು ಮಾರುಕಟ್ಟೆ ಮನೋಭಾವವು ದೇಶೀಯ ಈಕ್ವಿಟಿ ಮಾರುಕಟ್ಟೆ ಮೇಲೆ ಪ್ರಭಾವಿಸಿವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಮಂಗಳವಾರದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 505.72 ಅಂಕ ಏರಿಕೆಯಾಗಿ 44,655.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 140.10 ಅಂಕ ಜಿಗಿದು 13,109.05 ಅಂಕ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಂಡವು.

ಸೆನ್ಸೆಕ್ಸ್ ವಿಭಾಗದಲ್ಲಿ ಸನ್ ಫಾರ್ಮಾ ಶೇ 5ರಷ್ಟು ಏರಿಕೆ ಕಂಡಿದ್ದು ಇಂಡಸ್ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಒಎನ್‌ಜಿಸಿ, ಭಾರತಿ ಏರ್‌ಟೆಲ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಆಟೋ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಕೊಟಾಕ್ ಬ್ಯಾಂಕ್, ನೆಸ್ಲೆ ಇಂಡಿಯಾ, ಟೈಟಾನ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಎನ್‌ಟಿಪಿಸಿ ಹಿಂದುಳಿದವು. ರಿಯಾಲ್ಟಿ, ಟೆಲಿಕಾಂ ಮತ್ತು ಟೆಕ್ ಸೂಚ್ಯಂಕಗಳು ಶೇ 3.49ಕ್ಕೆ ಏರಿಕೆ ಕಂಡವು.

ತಾತ್ಕಾಲಿಕ ದತ್ತಾಂಶಗಳ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 7,712.98 ಕೋಟಿ ರೂ.ಯಷ್ಟು ಷೇರು ಖರೀದಿಸಿದ್ದಾರೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 37 ಪೈಸೆ ಏರಿಕೆ ಕಂಡು 73.68 ರೂ.ಗೆ ತಲುಪಿದೆ.

ಏಷ್ಯಾದ ಶಾಂಘೈ, ಟೋಕಿಯೊ, ಹಾಂಗ್ ಕಾಂಗ್ ಮತ್ತು ಸಿಯೋಲ್‌ನಲ್ಲಿನ ಪೇಟೆಗಳು ವ್ಯಾಪಕ ಲಾಭದೊಂದಿಗೆ ಕೊನೆಗೊಂಡವು. ಯುರೋಪಿನಲ್ಲಿನ ಸ್ಟಾಕ್ ಮಾರುಕಟ್ಟೆಗಳು ಆರಂಭಿಕ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡಿದೆ ಎಂಬುದು ಸಹ ಹೂಡಿಕೆದಾರರ ಖರೀದಿ ಮನೋಭಾವಕ್ಕೆ ಇಂಬು ನೀಡಿದೆ.

ABOUT THE AUTHOR

...view details