ಮುಂಬೈ: ಮುಂಬೈ ಷೇರು ಮಾರುಕಟ್ಟೆ ವಾರದ ಮೊದಲ ದಿನವೇ ಭಾರಿ ಏರಿಕೆ ಕಂಡಿದೆ. ವಹಿವಾಟಿನ ಆರಂಭದ ಮೊದಲ ಒಂದು ಗಂಟೆಯಲ್ಲೇ ಸೆನ್ಸೆಕ್ಸ್ ಒಂದು ಸಾವಿರಕ್ಕೂ ಅಧಿಕ ಅಂಕ ಏರಿಕೆಯಾಗಿದೆ.
ಸೋಮವಾರದ ಆರಂಭದ ಒಂದು ಗಂಟೆಯಲ್ಲಿ ಸೆನ್ಸೆಕ್ಸ್ 1,331 ಏರಿಕೆಯಾಗಿ 39,346 ಅಂಕದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 268 ಅಂಕ ಏರಿಕೆಯಾಗಿ 11,542ಕ್ಕೆ ಬಂದು ನಿಂತಿದೆ.
ಹಣಕಾಸು ಸಚಿವರ ಕ್ರಮ: ಭಾರತದಲ್ಲಿ ಅವಧಿಗೂ ಮೊದಲೇ ಬಂತು ದೀಪಾವಳಿ!
ಕಾರ್ಪೋರೇಟ್ ತೆರಿಗೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರದಂದು ಶೇ.25.17ಕ್ಕೆ ಇಳಿಸಿದ ಪರಿಣಾಮ ಇಂದಿನ ವಹಿವಾಟು ಏರುಗತಿಯಲ್ಲೇ ಆರಂಭ ಕಂಡಿದೆ. ಹಣಕಾಸು ಸಚಿವೆ ಶುಕ್ರವಾರ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿದ ಸಮಯದಲ್ಲೇ ಸೆನ್ಸೆಕ್ಸ್ 2000 ಸಾವಿರ ಅಂಕ ಏರಿಕೆಯಾಗಿತ್ತು.