ಮುಂಬೈ: ಫ್ಯೂಚರ್ಸ್ ಆ್ಯಂಡ್ ಆಪ್ಷನ್ (ಎಫ್ & ಒ) ಒಪ್ಪಂದದ ಜನವರಿ ಸರಣಿಯ ಮುಕ್ತಾಯ, ಲಾಭದ ಬುಕ್ಕಿಂಗ್ ಮತ್ತು ಮುಂದಿನ ವಾರ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಈಕ್ವಿಟಿ ಬೆಂಚ್ಮಾರ್ಕ್ ಕೆಂಪು ಬಣ್ಣದಲ್ಲಿ ಕೊನೆಗೊಂಡಿತು.
ಕಳೆದ ಐದು ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಇಂದು ಕೂಡ ತೀವ್ರವಾಗಿ ಕ್ಷೀಣಿಸಿತು. ದುರ್ಬಲ ಜಾಗತಿಕ ಮಾರುಕಟ್ಟೆಗಳ ಮಧ್ಯೆ ಐದು ದಿನಗಳ ಮಾರಾಟದಲ್ಲಿ ಸೆನ್ಸೆಕ್ಸ್ ಇಂದು 588 ಅಂಕ ಕುಸಿದು 46,821 ಅಂಕಗಳಿಗೆ ತಲುಪಿದೆ. ಈ ಅವಧಿಯಲ್ಲಿ ಬಿಎಸ್ಇ ಸುಮಾರು 3,000 ಅಂಕಗಷ್ಟು ಇಳಿಕೆಯಾಗಿದೆ.