ಮುಂಬೈ: ಜಾಗತಿಕ ಮಾರುಕಟ್ಟೆಗಳ ದೃಢ ಪ್ರವೃತ್ತಿಯ ಹೊರತಾಗಿಯೂ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರ 81 ಅಂಕ ಕುಸಿತ ಕಂಡಿದ್ದು ಐಟಿ, ಬ್ಯಾಂಕಿಂಗ್ ಮತ್ತು ಉಪಭೋಗ ವಿಭಾಗದ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂತು.
ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 80.74 ಅಂಕ ಇಳಿಕೆ ಕಂಡು 48,093.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 8.90 ಅಂಕ ಕುಸಿದು 14,137.35 ಅಂಕಗಳಲ್ಲಿ ಮಟ್ಟದಲ್ಲಿ ಕೊನೆಗೊಂಡವು.
ಸೆನ್ಸೆಕ್ಸ್ ವಿಭಾಗದಲ್ಲಿ ಟೈಟಾನ್ ಅಗ್ರಸ್ಥಾನದಲ್ಲಿ ಶೇ 2ರಷ್ಟು ಕುಸಿದರೇ ನೆಸ್ಲೆ ಇಂಡಿಯಾ, ಎಚ್‌ಯುಎಲ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಐಟಿಸಿ ಮತ್ತು ಕೊಟಾಕ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಭಾರ್ತಿ ಏರ್‌ಟೆಲ್, ಇಂಡಸ್‌ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್ ಮತ್ತು ಎಲ್ &ಟಿ ಲಾಭ ಗಳಿಸಿದವು.