ಮುಂಬೈ: ಹೋಳಿ ರಜೆ ಸೇರಿ ಮೂರು ದಿನಗಳ ಬಳಿಕ ವಹಿವಾಟು ಆರಂಭಿಸಿದ ಮುಂಬೈ ಷೇರುಪೇಟೆಯಲ್ಲಿಂದು ಸೆನ್ಸೆಕ್ಸ್ ಆರಂಭದಲ್ಲಿ 190 ಅಂಕಗಳ ಕುಸಿತ ಕಂಡು 57,673ರಲ್ಲಿ ಹಾಗೂ ನಿಫ್ಟಿ 30 ಅಂಶಗಳನ್ನು ನಷ್ಟದ ಬಳಿಕ 17,248ರಲ್ಲಿದ್ದವು.
ಇಂಧನ, ಹಣಕಾಸು ಹಾಗೂ ಎಫ್‌ಎಂಸಿಜಿ ಷೇರುಗಳಲ್ಲಿನ ಮಾರಾಟದ ಒತ್ತಡದಿಂದಾಗಿ ಸೂಚ್ಯಂಕಗಳ ಕುಸಿತಕ್ಕೆ ಕಾಣವಾಯಿತು. ಪವರ್ ಗ್ರಿಡ್ ಕಾರ್ಪೊರೇಷನ್ ತನ್ನ ಷೇರಿನ ಮೌಲ್ಯ ಶೇ.1.84ರಷ್ಟು ನಷ್ಟದ ನಂತರ 207.60 ರೂಪಾಯಿಗೆ ತಲುಪಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.1.71ರಷ್ಟು ಕುಸಿದು 493.15 ರೂಯಿಗೆ ಬಂದು ನಿಂತಿದೆ. ಕೊಟಕ್ ಬ್ಯಾಂಕ್ ಶೇ.1.62ರಷ್ಟು ಕುಸಿದು ಬಳಿಕ 1789.75 ರೂ., ಇಂಡಸ್‌ಇಂಡ್ ಬ್ಯಾಂಕ್ ಶೇ.1.54ರಷ್ಟು ಕುಸಿದು 918.45 ರೂ. ಹಿಂದೂಸ್ತಾನ್ ಯೂನಿಲಿವರ್ ಶೇ.1.45ರಷ್ಟು ಕುಸಿದು 2071.70 ರೂ. ನೆಸ್ಲೆ ಇಂಡಿಯಾ ಶೇ.1.23ರಷ್ಟು ಇಳಿಕೆಯಾಗಿ 18,045 ರೂಪಾಯಿಯಲ್ಲಿ ವಹಿವಾಟು ನಡೆಸುತ್ತಿವೆ.
ಮತ್ತೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.35ರಷ್ಟು, ಮಾರುತಿ ಸುಜುಕಿ ಶೇ.2.55ರಷ್ಟು ನಷ್ಟ ಕಂಡರೆ, ಟೈಟಾನ್, ಸನ್ ಫಾರ್ಮಾ, ಟಾಟಾ ಸ್ಟೀಲ್, ವಿಪ್ರೋ ಹಾಗೂ ಟೆಕ್ ಮಹೀಂದ್ರಾ ಲಾಭದಲ್ಲಿದ್ದವು. ಇತ್ತೀಚಿನ ವರದಿ ಪ್ರಕಾರ ಸೆನ್ಸೆಕ್ಸ್ 552 ಅಂಕಗಳನ್ನು ಕಳೆದು ಕೊಂಡು 57,311ರಲ್ಲಿದ್ದರೆ, ನಿಫ್ಟಿ 155 ಅಂಕಗಳ ಕುಸಿತದ ಬಳಿಕ 17,131ರಲ್ಲಿ ಇವೆ.
ಇದನ್ನೂ ಓದಿ:ಖಾತರಿ ಆದಾಯ ಯೋಜನೆ ಪಾಲಿಸಿಗಳಲ್ಲಿ ಹೂಡಿಕೆ ಲಾಭ ತರುತ್ತಾ..?