ಕರ್ನಾಟಕ

karnataka

ETV Bharat / business

ಆರಂಭಿಕ ವಹಿವಾಟಲ್ಲಿ 150 ಅಂಕ ಜಿಗಿದ ಸೆನ್ಸೆಕ್ಸ್​: 15,700 ಮಟ್ಟದಲ್ಲಿ ನಿಫ್ಟಿ - ಷೇರು ಮಾರುಕಟ್ಟೆ ಓಪನಿಂಗ್ ಬೆಲ್

ನಿಫ್ಟಿ ಕೂಡ 58.75 ಅಂಕ ಮುನ್ನಡೆ ಸಾಧಿಸಿ 15,694.10ಕ್ಕೆ ತಲುಪಿದೆ. ಮಧ್ಯಾಹ್ನ 12.25ರ ವೇಳೆಗೆ ಸೆನ್ಸೆಕ್ಸ್ 297.40 ಅಂಕ ಏರಿಕೆಯಾಗಿ 52,257.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 87.15 ಅಂಕ ಹೆಚ್ಚಳವಾಗಿ 15,722.50 ಅಂಕಗಳ ಮಟ್ಟದಲ್ಲಿದೆ.

Sensex
Sensex

By

Published : Jun 10, 2021, 12:40 PM IST

ಮುಂಬೈ: ಜಾಗತಿಕ ಈಕ್ವಿಟಿಗಳಲ್ಲಿನ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್​ಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ಗಳ ಲಾಭದಿಂದಾಗಿ ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕ ಜಿಗಿದಿದೆ. ಆರಂಭಿಕ ಹಂತದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕವು 160.07 ಅಂಕ ಅಥವಾ ಶೇ 0.31ರಷ್ಟು ಹೆಚ್ಚಳವಾಗಿ 52,101.71ಕ್ಕೆ ವಹಿವಾಟು ನಡೆಸಿತು.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 58.75 ಅಂಕ ಮುನ್ನಡೆ ಸಾಧಿಸಿ 15,694.10ಕ್ಕೆ ತಲುಪಿದೆ. ಮಧ್ಯಾಹ್ನ 12.25ರ ವೇಳೆಗೆ ಸೆನ್ಸೆಕ್ಸ್ 297.40 ಅಂಕ ಏರಿಕೆಯಾಗಿ 52,257.14 ಅಂಕಗಳ ಮಟ್ಟದಲ್ಲೂ ನಿಫ್ಟಿ 87.15 ಅಂಕ ಹೆಚ್ಚಳವಾಗಿ 15,722.50 ಅಂಕಗಳ ಮಟ್ಟದಲ್ಲಿದೆ. ಪವರ್‌ಗ್ರಿಡ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ 2ರಷ್ಟು ಏರಿಕೆ ಕಂಡಿದ್ದು, ಐಟಿಸಿ, ಟೆಕ್ ಮಹೀಂದ್ರಾ, ಇಂಡಸ್ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಸನ್ ಫಾರ್ಮಾ ಮತ್ತು ಡಾ.ರೆಡಿಸ್​ ಟಾಪ್​ ಗೇನರ್​​ಗಳಾದರೇ ಬಜಾಜ್ ಆಟೋ, ಏಷ್ಯಾನ್ ಪೇಂಟ್ಸ್, ಮಾರುತಿ ಮತ್ತು ನೆಸ್ಲೆ ಇಂಡಿಯಾ ಟಾಪ್​ ಲೂಸರ್​ಗಳಾದರು.

ಇದನ್ನೂ ಓದಿ: ಜಿಯೋ ಬಳಕೆದಾರರಿಗೆ Good News: ವಾಟ್ಸ್​ಆ್ಯಪ್​ನಲ್ಲಿ ಲಸಿಕೆ ಲಭ್ಯತೆ ಮಾಹಿತಿ ಉಚಿತ!

ಹಿಂದಿನ ಅವಧಿಯಲ್ಲಿ ಸೆನ್ಸೆಕ್ಸ್ 333.93 ಅಂಕ ಅಥವಾ 0.64ರಷ್ಟು ಕುಸಿದು 51,941.64 ಅಂಕಗಳಿಗೆ ತಲುಪಿತು ಮತ್ತು ನಿಫ್ಟಿ 104.75 ಇಳಿದ 15,635.35 ಅಂಕಗಳ ಮಟ್ಟದಲ್ಲಿ ಅಂತ್ಯವಾಯ್ತು. ತಾತ್ಕಾಲಿಕ ವಿನಿಮಯ ಮಾಹಿತಿಯ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 846.37 ಕೋಟಿ ರೂ. ಷೇರುಗಳನ್ನು ಮಾರಾಟ ಮಾಡಿದ್ದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾದರು.

ದೇಶೀಯ ಷೇರುಗಳು ಈಗಿನಂತೆ ಉತ್ತಮವಾಗಿ ಕಾಣುತ್ತವೆ. ಹಿಂದಿನ ಸೆಷನ್‌ನ ಮಾರಾಟದ ಒತ್ತಡವು ಯುಎಸ್ ಸಿಪಿಐ ದತ್ತಾಂಶ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ) ನೀತಿ ಸಭೆಯ ಫಲಿತಾಂಶಕ್ಕಿಂತ ಮುಂಚಿತವಾಗಿ ಲಾಭದ ಬುಕಿಂಗ್ ಕಾರಣ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಬಿನೋದ್ ಮೋದಿ ಹೆಡ್-ಸ್ಟ್ರಾಟಜಿ ಹೇಳಿದ್ದಾರೆ.

ABOUT THE AUTHOR

...view details