ಮುಂಬೈ: ಏಷ್ಯಾದ ಮಾರುಕಟ್ಟೆಗಳಲ್ಲಿನ ನಕಾರಾತ್ಮಕ ಬೆಳವಣಿಗೆ ಹಾಗೂ ನಿರಂತರ ವಿದೇಶಿ ನಿಧಿಯ ಹೊರಹರಿವಿನ ಹೊರತಾಗಿಯೂ ಮುಂಬೈ ಷೇರು ಪೇಟೆಯಲ್ಲಿಂದು ಗೂಳಿ ಓಟ ಮುಂದುವರಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 100 ಅಂಕಗಳ ಜಿಗಿತಕಂಡಿದ್ದು, 60,663.68ರಲ್ಲಿ ವಹಿವಾಟು ನಡೆಸುತ್ತಿದೆ.
ನಿಫ್ಟಿ ಕೂಡ 36.45 ಅಂಕಗಳ ಏರಿಕೆಯೊಂದಿಗೆ 18,105ರಲ್ಲಿತ್ತು. ಎಂ&ಎಂ ಷೇರುಗಳ ಮೌಲ್ಯ ಶೇ.2 ರಷ್ಟು ಏರಿಕೆಯಾಗಿ ಒಳ್ಳೆಯ ಲಾಭದಲ್ಲಿದೆ. ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಆಟೋ, ಎಲ್ & ಟಿ ಮತ್ತು ಟಿಸಿಎಸ್ ಷೇರುಗಳ ಮೌಲ್ಯದಲ್ಲಿ ಹೆಚ್ಚಾಗಿತ್ತು. ಮತ್ತೊಂದೆಡೆ, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್‌ಗ್ರಿಡ್, ಹೆಚ್‌ಡಿಎಫ್‌ಸಿ ಮತ್ತು ಏಷ್ಯನ್ ಪೇಂಟ್‌ಗಳು ಷೇರುಗಳು ನಷ್ಟ ಅನುಭವಿಸಿದವು.