ಕರ್ನಾಟಕ

karnataka

By

Published : May 28, 2019, 11:48 AM IST

ETV Bharat / business

ಷೇರುಪೇಟೆಯಲ್ಲಿಏರಿಳಿತ: ಶತಕ ಸಿಡಿಸಿ ಶೂನ್ಯಕ್ಕಿಳಿದ ಸೆನ್ಸೆಕ್ಸ್​

ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 22 ಪೈಸೆ ಕುಸಿತ ಕಂಡು ₹ 69.73 ಮಟ್ಟಕ್ಕೆ ಇಳಿದಿದೆ. ಸೋಮವಾರದ ಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,215.36 ಕೋಟಿ ಮೌಲ್ಯದ ಷೇರುಗಳು ಖರೀಸಿದ್ದರೇ ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 327.86 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಮುಂಬೈ: ವಿದೇಶಿ ಬಂಡವಾಳದ ನಿರಂತರ ಒಳಹರಿವಿನ ಪ್ರಭಾವಕ್ಕೊಳಗಾದ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್​ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಶಗಳ ಜಿಗಿತ ದಾಖಲಿಸಿತು.

ವಿದೇಶಿ ಬಂಡವಾಳದ ನಿರಂತರ ಒಳ ಹರಿವು, ದೇಶಿಯ ಹಾಗೂ ಜಾಗತಿಕ ಷೇರು ಪೇಟೆಗಳಲ್ಲಿನ ಸಕರಾತ್ಮಕ ನಡೆಯನ್ನು ಅನುಸರಿಸಿದ ಮುಂಬೈ ಪೇಟೆಯಲ್ಲಿ ಆರಂಭಿಕ ಉತ್ಸಾಹ ಕಂಡುಬಂತು. ಆದರೆ, ಬಳಿಕ ಇದೇ ಉತ್ಸಾಹ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿ ಶೂನ್ಯಕ್ಕೆ ತಲುಪಿ ಮತ್ತೆ ಋಣಾತ್ಮಕ ಹಾದಿಗೆ ಮರಳಿದೆ.

ಬೆಳಿಗ್ಗೆ 11.10 ಗಂಟೆಯ ವೇಳೆಗೆ ಸೆನ್ಸೆಕ್ಸ್​ 2.75 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 39,684.04 ಅಂಶಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 3.20 ಅಂಶಗಳ ಅಲ್ಪ ಇಳಿಕೆ ಕಂಡು 11,921.55 ಅಂಶಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 22 ಪೈಸೆ ಕುಸಿತ ಕಂಡು ₹ 69.73 ಮಟ್ಟಕ್ಕೆ ಇಳಿದಿದೆ. ಸೋಮವಾರದ ಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,215.36 ಕೋಟಿ ಮೌಲ್ಯದ ಷೇರುಗಳು ಖರೀಸಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 327.86 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ.

ಮಂಗಳವಾರದ ಬೆಳಗ್ಗಿನ ವಹಿವಾಟಿನಲ್ಲಿ ಯೆಸ್​ ಬ್ಯಾಂಕ್, ವೇದಾಂತ್, ಕೋಲ್ ಇಂಡಿಯಾ, ಸನ್ ಫಾರ್ಮಾ, ಬಜಾಜ್ ಆಟೋ, ಇಂಡಸ್ ಲ್ಯಾಂಡ್​ ಬ್ಯಾಂಕ್​, ಪವರ್ ಗ್ರಿಡ್​, ಟಾಟಾ ಸ್ಟೀಲ್​, ಎಕ್ಸಿಸ್​​ ಬ್ಯಾಂಕ್​ ಷೇರುಗಳು ಮೌಲ್ಯ ಜಿಗಿತ ಕಂಡರೆ ಕೊಟಕ್ ಬ್ಯಾಂಕ್, ಭಾರ್ತಿ ಏರ್​ಟೆಲ್​, ಬಜಾಜ್ ಫೈನಾನ್ಸ್​, ಎಚ್​ಸಿಎಲ್​ ಟೆಕ್, ಐಸಿಐಸಿಐ ಬ್ಯಾಂಕ್ ಮತ್ತು ಐಟಿಸಿ ಷೇರುಗಳ ದರ ಇಳಿಕೆ ಆಯಿತು.

For All Latest Updates

TAGGED:

ABOUT THE AUTHOR

...view details