ಮುಂಬೈ: ದಿನದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಬೆಂಚ್ಮಾರ್ಕ್ 100 ಅಂಕಗಳ ಏರಿಕೆ ಕಂಡು ವಹಿವಾಟು ಆರಂಭಿಸಿದೆ. ವಿದೇಶಿ ಬಂಡವಾಳದ ನಿರಂತರ ಹರಿಯುವಿಕೆಯಿಂದಾಗಿ ಐಟಿ ಷೇರುಗಳು ಲಾಭದತ್ತ ಮುಖ ಮಾಡಿವೆ.
ಸೆನ್ಸೆಕ್ಸ್ 100 ಅಂಕಗಳ ಏರಿಕೆಯೊಂದಿಗೆ 36.75 ಪಾಯಿಂಟ್ ಅಥವಾ 0.06 ಇಳಿಕೆಯೊಂದಿಗೆ 58.968.52ಕ್ಕೆ ತಲುಪಿದೆ. ನಿಫ್ಟಿ ಸಹ 10.45 ಅಂಕ ಕುಸಿತ ಕಂಡು 17,551.55ನಲ್ಲಿ ವಹಿವಾಟು ಆರಂಭಿಸಿದೆ.
ಈ ದಿನದ ಸೆನ್ಸೆಕ್ಸ್ನಲ್ಲಿ ಹೆಚ್ಡಿಎಫ್ಸಿ ಬ್ಯಾಂಕ್ ಅತೀ ಹೆಚ್ಚು ಕುಸಿತ ಅನುಭವಿಸಿದೆ. ಮತ್ತೊಂದೆಡೆ, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ನೆಸ್ಲೆ , ಹೆಚ್ಯುಎಲ್, ಟೆಕ್ ಮಹೀಂದ್ರಾ, ಎನ್ಟಿಪಿಸಿ, ಎಂ&ಎಂ, ಹೆಚ್ಸಿಎಲ್ ಮತ್ತು ಟೈಟಾನ್ ಗಳಿಕೆ ಕಂಡಿವೆ.
ಹಿಂದಿನ ವಹಿವಾಟಿನಲ್ಲಿ 30 - ಷೇರು ಸೂಚ್ಯಂಕವು 514.34 ಪಾಯಿಂಟ್‌ಗಳು ಅಥವಾ ಶೇ.0.88ರಷ್ಟು ಏರಿಕೆ ಕಂಡು 59,005.27ಕ್ಕೆ ಕೊನೆಗೊಂಡಿತು. ಆದರೆ, ನಿಫ್ಟಿ 165.10 ಪಾಯಿಂಟ್‌ಗಳು ಅಥವಾ ಶೇ.0.95ರಷ್ಟು ಅಂದರೆ 17,562ಕ್ಕೆ ಏರಿಕೆ ಕಂಡಿತ್ತು.
ಭಾರತ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳು ದೇಶೀಯ ಮಾರುಕಟ್ಟೆಯಲ್ಲಿ ಎಫ್‌ಐಐಗಳ ಸುಧಾರಣೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಅಮೆರಿಕದಲ್ಲಿ ಕೊರೊನಾ ವೈರಸ್ ಪ್ರಕರಣ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ಗಳಿಕೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಹೇಳಲಾಗಿದೆ.
ಅಮೆರಿಕದ ಷೇರುಗಳು ಸತತವಾಗಿ 4ನೇ ದಿನವೂ ನಷ್ಟ ಅನುಭವಿಸುತ್ತಿವೆ. ಏಷ್ಯಾದ ಇತರೆಡೆಗಳಲ್ಲಿ, ಶಾಂಘೈ ಮತ್ತು ಟೋಕಿಯೋದಲ್ಲಿನ ಷೇರುಗಳು ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಹಾಂಕಾಂಗ್ ಮತ್ತು ಸಿಯೋಲ್ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.
ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ ಮೇಲೆ ಶೇ.0.98ರಷ್ಟು ಏರಿಕೆ ಕಂಡಿದೆ. ಈ ಮೂಲಕ ಪ್ರತಿ ಬ್ಯಾರೆಲ್ ಬೆಲೆ 75.09 ಡಾಲರ್ಗೆ ತಲುಪಿದೆ.