ಕರ್ನಾಟಕ

karnataka

ETV Bharat / business

ನವ ಆರ್ಥಿಕ ವರ್ಷದ ಹೊಸ್ತಿಲಲ್ಲಿ ಗೂಳಿ ಶೈನಿಂಗ್​: 400 ಅಂಕ ಜಿಗಿದ ಸೆನ್ಸೆಕ್ಸ್​ - ಷೇರು ಮಾರುಕಟ್ಟೆ ಒಪನಿಂಗ್ ಬೆಲ್

ಗುರುವಾರದ ವಹಿವಾಟಿನಂದು ಬೆಳಗ್ಗೆ 9.30ರ ವೇಳಗೆ ಮುಂಬೈ ಷೇರು ಸೂಚ್ಯಂಕ 359 ಅಂಕ ಏರಿಕೆಯಾಗಿ 49868.77 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 154 ಅಂಕ ಹೆಚ್ಚಳವಾಗಿ 14,787.90 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.

Sensex
Sensex

By

Published : Apr 1, 2021, 9:51 AM IST

ಮುಂಬೈ:ಭಾರತೀಯ ಮಾರುಕಟ್ಟೆಗಳು 2022ರ ಹೊಸ ಆರ್ಥಿಕ ವರ್ಷದ ಮೊದಲ ದಿನದಂದು ಸದೃಢವಾದ ವಹಿವಾಟಿನೊಂದಿಗೆ ಆರಂಭಿಸಿವೆ.

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಅರ್ಧದಷ್ಟು ವಹಿವಾಟು ನಡೆಸಿದ್ದು, ಅನುಕೂಲಕರ ಜಾಗತಿಕ ಸೂಚನೆಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 400 ಅಂಕ ಜಿಗಿತ ದಾಖಲಿಸಿದೆ. ರಾಷ್ಟ್ರೀಯ ಷೇರು ಸೂಚ್ಯಂಕ 14,800 ಅಂಕಗಳ ಗಡಿ ದಾಟಿದೆ.

ಇದನ್ನೂ ಓದಿ: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ ಆದೇಶ ವಾಪಸ್​: ಇದರಿಂದ ಯಾರಿಗೆಲ್ಲ ಅನುಕೂಲ?

ಬೆಳಗ್ಗೆ 9.30ರ ವೇಳಗೆ ಮುಂಬೈ ಷೇರು ಸೂಚ್ಯಂಕ 359 ಅಂಕ ಏರಿಕೆಯಾಗಿ 49868.77 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 154 ಅಂಕ ಹೆಚ್ಚಳವಾಗಿ 14,787.90 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ.

ಹಣಕಾಸಿನ ವರ್ಷಾಂತ್ಯದೊಂದಿಗೆ ಹೂಡಿಕೆದಾರರು ಮುಂಬರುವ ತ್ರೈಮಾಸಿಕ ಫಲಿತಾಂಶಗಳತ್ತ ಗಮನ ಹರಿಸಲಿದ್ದಾರೆ. ಇದು ಏಪ್ರಿಲ್ ಮಧ್ಯದಿಂದ ಪ್ರಾರಂಭವಾಗುತ್ತದೆ. ದೇಶೀಯವಾಗಿ ಭಾರತದಲ್ಲಿ ವೇಗವಾಗಿ ಹರಡುವ ಕೋವಿಡ್​-19 2ನೇ ಅಲೆಯ ಬಗ್ಗೆ ಆತಂಕಗಳು ಮುಂದುವರೆದಿದೆ. ಸಂಭವನೀಯ ಲಾಕ್‌ಡೌನ್‌ಗಳ ಭಯವು ಮೇಲುಗೈ ಸಾಧಿಸಲಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಇಂದು ಮಾರುಕಟ್ಟೆ ಸಕರಾತ್ಮಕವಾಗಿ ವಹಿವಾಟು ನಡೆಸಿದೆ.

ಎಚ್​ಸಿಎಲ್​ ಟೆಕ್, ಇಂಡಸ್ಇಂಡ್ ಬ್ಯಾಂಕ್, ಎನ್​ಟಿಪಿಸಿ, ಬಜಾಜ್ ಆಟೋ, ಮಾರುತಿ, ರಿಲಯನ್ಸ್, ಎಚ್​ಡಿಎಫ್​ಸಿ, ಕೊಟಾಕ್​ ಬ್ಯಾಂಕ್, ಇನ್ಫೋಸಿಸ್​, ಎಂ&ಎಂ, ಐಸಿಐಸಿಐಸಿ ಬ್ಯಾಂಕ್, ಟೈಟನ್, ಸನ್​ಫಾರ್ಮಾ, ಎಸ್​ಬಿಐಎನ್​, ಪವರ್​ ಗ್ರೀಡ್​ ಟಾಪ್​ ಗೇನರ್​ಗಳಾಗಿದ್ದರೇ ನೆಸ್ಲೆ ಇಂಡಿಯಾ ಟಾಫ್​ ಲೂಸರ್ ಆಯಿತು.

ABOUT THE AUTHOR

...view details