ಮುಂಬೈ:ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಮುಂಬೈ ಸೂಚ್ಯಂಕದ ಮೇಜರ್ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಜಾಜ್ ಫೈನಾನ್ಸ್ಗಳ ಲಾಭದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ 613 ಅಂಕ ಹೆಚ್ಚಳವಾಗಿ 50,000 ಗಡಿ ದಾಟಿದೆ.
ದಿನದ ವಹಿವಾಟಿನ ಅಂತ್ಯದ ವೇಳೆಗೆ ಮುಂಬೈ ಸಂವೇದಿ ಷೇರು ಸೂಚ್ಯಂಕ ಸೆನ್ಸೆಕ್ಸ್ 612.60 ಅಂಕ ಅಥವಾ ಶೇ 1.24ರಷ್ಟು ಹೆಚ್ಚಳವಾಗಿ 50,193.33 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 15,000 ಅಂಕ ಮೀರಿ 184.95 ಅಂಕ ಅಥವಾ ಶೇ 1.24ರಷ್ಟು ಗಳಿಕೆಯಾಗಿ 15,108.10 ಅಂಕಗಳಲ್ಲಿ ಕೊನೆಗೊಂಡಿತು.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಂ&ಎಂ ಅಗ್ರ ಲಾಭ ಗಳಿಸಿದ್ದು, ಶೇ 6ರಷ್ಟು ಆದಾಯ ಪಡೆದಿದೆ. ನಂತರದ ಸ್ಥಾನದಲ್ಲಿ ಬಜಾಜ್ ಆಟೋ, ಟೈಟಾನ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪವರ್‌ಗ್ರಿಡ್ ಇವೆ. ಭಾರ್ತಿ ಏರ್‌ಟೆಲ್, ಐಟಿಸಿ, ಡಾ. ರೆಡ್ಡಿಸ್ ಮತ್ತು ಎಸ್‌ಬಿಐ ದಿನದ ಟಾಪ್ ಲೂಸರ್ ಗಳಾದವು.
ಇದನ್ನೂ ಓದಿ: ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ವೈರ್ಲೆಸ್ ಚಾರ್ಜಿಂಗ್ ಪರಿಚಯಿಸಿದ ಎಲ್ಜಿ